ಹಂಬಲಿಸು – ಚಿಂದಿ – ತಮಟೆ – ಕಾರಖಾನೆ

ಹಂಬಲಿಸು – ಚಿಂದಿ – ತಮಟೆ – ಕಾರಖಾನೆ

ಅವಿವೇಕ, ಅಸಹನೆ
ಅವಸರಗಳಂಥ
ಅಪಸವ್ಯಗಳಿಂದ
ಚಿಂದಿ ಚಿಂದಿಯಾಗುತ್ತಿರುವ
ಇಂದಿನ ಯುವ ಜನಾಂಗದ ಬದುಕನ್ನು
ಮರುಜ್ಜೀವನಗೊಳಿಸಿ ಚಂದವಾಗಿಸುವ
ಒಂದು “ಕಾರಖಾನೆ” ತೆಗೆಯಬಹುದಾಗಿದ್ದರೆ……..

ಇಂಥದೊಂದು ಹಂಬಲಿಕೆ, ಗ್ರಹಿಕೆ
ನನ್ನನ್ನು ಸದಾ ಕಾಡುತ್ತಿರುತ್ತದೆ…

ಮರುಕ್ಷಣವೇ ಬದುಕೆಂದರೆ ಬಣ್ಣಗೆಟ್ಟ ಕಾರಲ್ಲ..
ಅದನ್ನು ಯಾರೋ ಬದಲಿಸಿ ತಮಟೆ ಹೊಡೆದು
ಜಗಜ್ಜಾಹೀರು ಮಾಡಿ ನಮ್ಮ ಅಂಗಳದಲ್ಲಿ
ನಿಲ್ಲಿಸಲಾಗುವದಿಲ್ಲ…

ನಾವೇ ನಮ್ಮನ್ನೇ ನಮಗಾಗಿಯೇ
ತೊಡಗಿಸಿಕೊಂಡು ತರಬೇಕಾದ
ತುರ್ತು ಬದಲಾವಣೆಯಂದು
ಒಳಮನಸ್ಸು ನೆನಪಿಸಿದಾಗ
……..ನಿರುತ್ತರಳಾಗುತ್ತೇನೆ……..

Leave a Reply