ಹನಿ ಹನಿ-೨

ಹನಿ ಹನಿ

ತಾಕತ್ತು
ದೊಡ್ಡ ದುಃಖದೆದುರು
ಸಣ್ಣ ಸಂತೋಷದ
ಕಿಮ್ಮತ್ತು
ಸೂರ್ಯನೆದುರು ಉರಿವ
ಮುಂಬತ್ತಿಯ ತಾಕತ್ತು!

ಮುಪ್ಪು
ಬಾಲ್ಯ, ಯೌವನದಲ್ಲಿ
ಕೂಡಿಟ್ಟ ಒಂದೊಂದೇ
ಅನುಭವವನ್ನು
ಎಣಿಸಿ ತೂಗಿ
ನೋಡುವ ಕಾಲ!

ಆಯಸ್ಸು
ಆಯಸ್ಸು ಹೀಗೇ
ಫ್ಯಾನ್ ನ ರೆಕ್ಕೆಯಂತೆ
ಸರಿಯತ್ತೆ
ಒಂದರ ಹಿಂದೊಂದರಂತೆ,
ಎಣಿಕೆಗೆ ಸಿಗದಂತೆ!

Leave a Reply