ಹರ್ಷ – ಶೂಲ – ಚಿಮ್ಮು – ಕವಿತೆ

ಹರ್ಷ – ಶೂಲ – ಚಿಮ್ಮು – ಕವಿತೆ

ಈ ಜೀವನವೇ ವಿಚಿತ್ರ
ಇದಕ್ಕಿಲ್ಲ ಯಾವುದೇ
ಸಿದ್ಧ ಸೂತ್ರ..
ಇದು ಒಂದು ನವ್ಯಕವಿತೆ….
ಇದಕ್ಕಿಲ್ಲ ಪ್ರಾಸ-ಛಂದಸ್ಸಿನ ಬದ್ಧತೆ…

ಸರಕಾರೀ ನಳದಂತೆ
ಹನಿಹನಿಯಾಗಿ ಒಮ್ಮೆ
ತಟಗಿಕ್ಕಿದರೆ ಮತ್ತೊಮ್ಮೆ
ತೂಬು ತೆಗೆದ ಆಣೆಕಟ್ಟಿನಂತೆ
ಭೋರ್ಗರೆದು ಚಿಮ್ಮಬಹುದು….

ಒಂದು ಗಳಿಗೆ ಹರ್ಷದ ಹೊನಲು
ಮರುಗಳಿಗೆ ಶೂಲದ ನೆರಳು
ಅವರವರ ಪಾಲಿನದು
ಅವರವರ ಪಂಚಾಮೃತ

Leave a Reply