ಮರಣ

‘ಜೀವ’ನ ನಾಟಕ ನೆತ್ತರ ಚಿತ್ರಣ
ನರಕದ ದೃಶ್ಯಕೆ ಕೊನೆಯುಂಟೇ!
ವಸ್ತ್ರವ ಕಳಚುವ ಪರಿಯದು
‘ಜೀವ’ನ ಪ್ರಶ್ನಿಸಲೆನಗೆ ಎಡೆಯುಂಟೆ

ಜನ್ಮವ ತಳೆದಿಹ ‘ಜೀವ’ನ ಗತ್ಯವ
ಕಾಣುವ ಕಣ್ಣು ನಮಗುಂಟೆ?
ತೋರುವ ಸತ್ಯಕೆ ಮರುಗುವ ಮನವು
ಅಂತಿಮ ಸತ್ಯವರಿಯಲುಂಟೆ!

ಕೊಲ್ಲುವ ಕಾಯುವ ‘ಜೀವ’ನ ಕರವದು
ಸತ್ತೂ ಬದುಕುವ ಪರಿಯೇನೆ!
ತನ್ನದೆ ವಸ್ತ್ರ ತಾನ್ ಕಳಚಲುಬಳಸುವ
ನಿನ್ನೊಂದಸ್ತ್ರವ ಸರಿಯೇನೇ!

‘ಜೀವ’ನಾಟವನು ಅರಿಯಲು ಲಭಿಸಿಹ
ಅವನಿಯ ನೋಟವು ಹೀಗೇನೆ!
ಹೇಳುವನವನಿಗೆ ತಿಳಿಯದುದೇನಿದೆ?
ಕಾಲನ ಚಿತ್ರಣ ನಿಜವೇನೆ!

2 Comments

  1. ರಸ್ತೆ ಅಪಘಾತದ, ದುರ್ಮರಣದ, ದೃಷ್ಯ ಮೂಡಿಸಿದ ಭಾವತರಂಗ

  2. ನಿಜವಾಗಿಯೂ ಮನ ಮಿಡಿಸುವಂತಹ ಭಾವನೆಗಳು….

Leave a Reply