ಬದುಕು

ಬದುಕು
“ಬಾಲ್ಯದಲಿ ಹುಡುಗಾಟ, ಯೌವನದಿ ‘ಮತ್ತು’
ಮುಪ್ಪಿನಲಿ ತೊಳಲಾಟ, ಬೇರೆ ಏನಿತ್ತು?
ಎಂದು ಕೊರಗುವ ಮೊದಲೇ ಒಂದಿಷ್ಟು ಬಾಳು…
ಪಕ್ಕಕ್ಕೆ ಸರಿಸಿಬಿಡು ಪ್ರತಿದಿನದ ಗೋಳು…

ಸ್ವಗತ
“ಶೋಷಣೆಯ ಜಗತ್ತಿಗೆ ನಾನೇಕೆ ಬಂದೆ?
ಎಲ್ಲಾ ಗೊತ್ತಿದ್ದವನು’ ನೀನೇಕೆ ತಂದೆ?
ಬಹಳಷ್ಟು ಹೆಣ್ಣುಗಳು ಹಲುಬುತಿರಬಹುದು…
ಮರಳಿ ಸೇರಲು ‘ಗರ್ಭ’ ಹುಡುಕುತಿರಬಹುದು!

Leave a Reply