ದಾಂಪತ್ಯ

ದಾಂಪತ್ಯ
ಹಂಚಿಕೊಳುತಲಿ
ಸುಖ ದುಃಖಗಳ
ನನದು-ನಿನ್ನದೆನ್ನದೆ

ಹಿಡಿದಿಟ್ಟುಕೊಳುತ
ಭವಿತವ್ಯವನು
ಭರವಸೆಯ ಮುಷ್ಟಿಯಲಿ

ನಿಭಾಯಿಸುತ
ಜಾಣತನದಲಿ
ನಿತ್ಯದಾ ಬವಣೆಯನು

ನಿಲ್ಲುತಾ ಎದೆಯೊಡ್ಡಿ
ಅನಿರೀಕ್ಷಿತದ
ಸಂಕಟಕೆ

ಕುಡಿ ನಡೆಯುತ
ಬಹುಕಾಲ
ಸರಿದಾರಿಯಲಿ

ನೂರ್ಮಡಿಸಿಕೊಳ್ಳುತಲಿ
ಬಾಳಿನೆಡೆಗಿನ
ಶ್ರದ್ದೆ- ಪ್ರೀತಿಯನು
ಮೀರಿಸುವಂತಿರಲಿ ಒಬ್ಬರನೊಬ್ಬರು
ಬದುಕ ಹಸಿರಾಗಿಸುವ
ವಿದ್ಯೆಯಲಿ.

ಹೊಸ್ಮನೆ ಮುತ್ತು

Leave a Reply