ದೇವಮಾನವ

ದೇವಮಾನವ
ಬಹಳಷ್ಟು ಪಾಪಗಳ ಮಾಡಿರುವೆ ನಾನು,
ಪ್ರಾಯಶ್ಚಿತಕೆ ಪ್ರಯಾಗಕ್ಕೆ ನೀವ್ ಬರುವಿರೇನು ?
ಇದ ನಂಬಿಬಂದೆಲ್ಲಾ ಇಲಿಗಳನು ನುಂಗಿ…
ತೇಗಿರುವ ಬೆಕ್ಕುಗಳೇ “ದೇವಮಾನವರು” ತಂಗಿ…

ಸ್ವಚ್ಛತಾ ಅಭಿಯಾನ
“ಸ್ವಚ್ಛತಾ ಅಭಿಯಾನ” ಮನದನ್ಗಳಕೂ ಬೇಕು…
ಒಳಗುದಿಗಳನೆಲ್ಲ ಗುಡಿಸಿಬಿಡಬೇಕು…
ಪರಿಶುದ್ಧವಾದರೆ ನಮ್ಮಂತರಂಗ ….
ಶಾಂತಿ – ನೆಮ್ಮದಿಗಳಿಗೆ ಬರದೆಂದು ಭಂಗ …..

Leave a Reply