ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ

ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ
ಮಮತೆ ತುಂಬಿದ ಕರುಳಿಲ್ಲದ ಬಳಿಕ
ಪ್ರೀತಿ ತುಂಬಿದ ಹೃದಯವಿಲ್ಲದ ಬಳಿಕ
ದಯೆ ಇಲ್ಲದ ಕಣ್ಣುಗಳೇ ಇಲ್ಲದ ಬಳಿಕ
ದಾನವಿಲ್ಲದ ಹಸ್ತಗಳಿಲ್ಲದ ಬಳಿಕ
ಅನುಕಂಪದ ಮಾತುಗಳಿಲ್ಲದ ಬಳಿಕ
ಕಷ್ಟದಲ್ಲಿ ಜೊತೆಸಾಗುವ ಕಾಲೇ ಇಲ್ಲದ ಬಳಿಕ
ಭರವಸೆಯ ಬೆಳಕಾಗುವ ಬಾಹುಗಳಿಲ್ಲದ ಬಳಿಕ
ಕೊಂಡು ತರಲಾಗದ ಮೌಲ್ಯಗಳಿವು ಇಲ್ಲದ ಬಳಿಕ
ಎಷ್ಟೇ ದುಡ್ಡಿದ್ದರೂ ಅವನೊಬ್ಬ ಏನು ಗತಿ ಇಲ್ಲದ ಭಿಕ್ಷಕ .

Uma bhatkhande

Leave a Reply