ಹಣ

ಹಣ
ಹಣವಿರುವದು ನಮಗಾಗಿ, ನಾವು ಹಣಕ್ಕಲ್ಲ…
ಬಲವೇ ದೇಹವನು ಎಳೆಯುತಿಹುದಲ್ಲ!
ಹಣವು ಬೇಕೇಬೇಕು ಒಂದು ಮಿತಿಯಲ್ಲಿ…
ಅದರ ಸುಳಿಯಲ್ಲಿ ಸಿಲುಕಿದರೆ ಬೇರೆ ಬದುಕೆಲ್ಲಿ!?

ಸಂಸತ್ತು
ದಿನಕ್ಕೊಂದು ಹೇಳಿಕೆ, ಮರುದಿನ ವಾಪಸಾತಿ…
ವಾದ-ಪ್ರತಿವಾದಗಳಲ್ಲಿ ಕಲಾಪಗಳ ಆಹುತಿ…
ಪ್ರತಿ ಸಂಸದಗೂ ತಾ ಹಿಡಿದದ್ದೇ ಹದಿ…
ಒಟ್ಟಿನಲ್ಲಿ ಎಲ್ಲರೂ ಅವಕಾಶವಾದಿ…

Leave a Reply