ಹೇ…ಚಲುವ ಚನ್ನಿಗರಾಯ

ಹೇ…ಚಲುವ ಚನ್ನಿಗರಾಯ

ಹೇ…ಸೃಷ್ಟಿ ಸೂತ್ರಧಾರ
ಹೇ… ಮೋದಪ್ರದ ಹರಿಕಾರ
ಹೇ…ಪ್ರೇಮ ಗಾನ ಗಂಧರ್ವ
ಹೇ…ಕಮಲ ವದನ
ಹೇ…ಸಂಪಿಗೆ ನಾಸಿಕ ಕೃಷ್ಣ
ಹೇ… ನೀಲ ವರ್ಣ ಘನ ಶ್ಯಾಮ
ಹೇ…ಕೃಷ್ಣ ವರ್ಣ ಶ್ಯಾಮ
ಹೇ…ವೇಣು ಗೋಪಾಲ
ಹೇ…ನವಿಲುಗರಿ ಪೊತ್ತ ಮುರಾರಿ
ಹೇ…ರಾಧಾ ರಮಣ
ಹೇ…ಮಂದಸ್ಮಿತ ಮೋದನಿ ಯ
ಹೇ….ಅಗಣಿತ ಗುಣಸಾಗರ
ಬರಿದಾದ ಮಸ್ತಕಕೆ ನೀಡು ಜ್ಞಾನ
ವರ್ಣಿಸಲು ನೀಡು ಕಡಲಷ್ಟು ಶಬ್ಧ
ಏನೂ ಅರಿಯದ ಚಿತ್ತಕೆ ಚಿಂತೆ ಕಳೆಯುವೆ ಹರಿಯೇ
ಬರಿಯ ನಿನ್ನ ಹುಸಿ ಮಂದ ನಗೆಯಿಂದ
ವ್ಯರ್ಥ ಹೆಣಗುವ ಈ ಬದುಕಿಗೆ ಬೇಗ ಮುಕ್ತಿಯ ನೀಡು
ನಿನ್ನ ಪಾದ ಪದ್ಮದಲಿ ಕಡೆಗೆ ಧೂಳಾದರು ಸರಿಯೇ.

ನಿನ್ನ ಮಾತ್ರ

Leave a Reply