ಹೊಸ ಹೆಜ್ಜೆ!

ಹೊಸ ಹೆಜ್ಜೆ!
ಅಂದು ಮುಂದಿನ ನೆನೆನೆನೆದು ವ್ಯರ್ಥ ಕಾಲ ಕಳೆವುದೇಕೆ ಮರುಳೆ
ನಿತ್ಯ ಹೊಸ ಪ್ರಜ್ವಲಿಸುವ ಕಿರಣಗಳ ಹೊತ್ತು ತರುವನು ರವಿ
ಇರುಳ ಕರ್ಮೊಡಗಳುರುಳಿ ಹಗಲಲಿ ಮತ್ತೆ ಬಾನು ತಿಳಿನೀಲಿ ಮೋಡಗಳ ತರುವನು
ಕಾಲ ಕಾಲಕ್ಕೆ ಎಳೆಗಳನುದುರಿಸಿ ಮತ್ತೆ ಚಿಗುರೊಡೆದು ನಲಿವ ಗಿಡಮರ
ಮಳೆ ಗಾಳಿಗೆ ತೂರಿ ಹೋಗುವ ಗೂಡ ಬಿಟ್ಟು ಹೊಸ ಗೂಡ ಕಟ್ಟುವುದು ಬಾನಾಡಿ
ದಿನದಿನದ ಬದುಕಿದು ಅಂದಂದೇ ಕಟ್ಟಿ ಸವಿಯಾಗಿ ಸವಿಯೋಣ
ಪ್ರತಿಘಳಿಗೆ ಹೊಸ ಉತ್ಸಾಹ ಹೊಸ ಚೈತನ್ಯ ತುಂಬಿ ಹೊಸ ಹೆಜ್ಜೆ ಇಡುತ
ಮಂದಹಾಸದಲಿ ನೋವು ನಲಿವುಗಳ ಮೆಟ್ಟಿ ನಿಲ್ಲುತ ಮುಂದೆ ಸಾಗೋಣ
ಬಂದದ್ದು ಬರಲಿ ಹೊಸ ಭರವಸೆಯಲ್ಲಿ ಬದುಕಿನ ಬಂಡಿ ಎಳೆಯೋಣ
ಕ್ಷಣ ಕ್ಷಣದ ಈ ಜೀವನದ ರಸನಿಮಿಷಗಳ ಸವಿಯನುಂಡು ಬದುಕೋಣ

Leave a Reply