ನಮ್ಮ ನಿಮ್ಮ ಕಥೆ

ನಮ್ಮ ನಿಮ್ಮೆಲ್ಲರ ಬದುಕು ಒಂದೊಂದು ಕಥೆ…
ಸ್ವಲ್ಪ ಸುಖವಿದೆ, ಮತ್ತಿದೆ ಒಂದಿಷ್ಟು ವ್ಯಥೆ.

ಸಿರಿವಂತನ ಮನೆಯಲಿ ಕೊಳೆಯುತಿದೆ ಹಣದ ಕಂತೆ
ಆದರೂ ಅವನಿಗಿಲ್ಲ ನೆಮ್ಮದಿ ನಿಶ್ಚಿಂತೆ

ಬಡವನಿಗೆ ಮನೆಯೇ ಇಲ್ಲ… ತುತ್ತು ಕೂಳಿಗೂ ಚಿಂತೆ
ಅವನ ಬಾಳಿನುದ್ದಕ್ಕೂ ಕಷ್ಟ ಕೋಟಲೆಗಳ ಸಂತೆ

ಎಲ್ಲರ ಬದುಕೂ ಸಾಗುತಿದೆ ಸಮುದ್ರದಲೆಗಳಲಿ ದೋಣಿ ಸಾಗಿದಂತೆ
ನಗುತ ತನ್ನ ದೋಣಿಯ ದಾಟಿಸುವವನೆ ಪರಮ ಸುಖಿಯಂತೆ !

1 Comment

  1. ಸತ್ಯದ ಮಾತು…..
    ಸುಖವಿದೆ ಎಂದು ಜೀವನ ಮಾಡಿದರೆ ಸುಖದಿಂದಿರುತ್ತೇವೆ …..
    ಇಲ್ಲದಿದ್ದರೆ ಜೀವನ ಪೂರ್ತಿ ಕಷ್ಟದಲ್ಲಿರುತ್ತೇವೆ….

Leave a Reply