ನನ್ನ ಬಾಲ್ಯದ ಶಿಕ್ಷಕಿ

ನನ್ನ ಬಾಲ್ಯದ ಶಿಕ್ಷಕಿ ನಾಗರತ್ನ.

ನಾ ಕಂಡ ಬಾಲ್ಯದ ಶಿಕ್ಷಕಿ ನಾಗರತ್ನ
ಪ್ರೀತಿ ಇವಳಿಗೆ ಸದಾ ಮುತ್ತು – ರತ್ನ

ಕಣ್ಕಟ್ಟಿದೆ ಇವರ ಸೀರೆ ಉಡುವ ವೈಖರಿ
ಹಣೆಯ ಕುಂಕುಮದಲ್ಲಿ ಕಾಣಸಿಗುವಳು ಬನಶಂಕರಿ.

ಮರೆಯುವರು ಹಲವು ಬಾರಿ ಹೆಣೆಯುವುದು ಜಡೆ
ತರಗತಿಯೇ ಸಾಕು ತಯಾರಾಗಲು ಇವರಿಗಿಲ್ಲ ಭಿಡೆ.

ಕನ್ನಡಿ ಇವರ ಮುಂದಿನ ಸಾಲಿನ ಹುಡುಗಿಯರು
ಸೈನಿಕರಿವರಿಗೆ ಹಿಂದಿನ ಸಾಲ ಹುಡುಗರು

ದ್ವನಿಯಲ್ಲೆ ಅಡಗಿತ್ತು ಚಾಟಿ ಏಟು
ಕೊಡುತ್ತಿರಲಿಲ್ಲ ಮಕ್ಕಳಿಗೆ ಒಂದೂ ಏಟು

ಜಗಿದು ಬಿದ್ದರೆ ಸಿಗುವುದಿವರ ಮನೆ
ಸಮಯಕ್ಕೆ ಸರಿಯಾಗಿ ಬರುವರು ಒಂದೇ ದಿನ ತಿಂಗಳ ಕೊನೆ.

ಬಿಡುವರು ಮನೆಯಲ್ಲೆ ಮರೆತು ತಿಂಡಿ ಡಬ್ಬ
ತರಲು ಹೊರಡುವ ಹುಡುಗರಿಗೆ ನಾಡಹಬ್ಬ

ಗಾಡ್ರೆಜ್ ಕಬಾರ್ಡ ಇವರ ಕೈ ಚೀಲ
ಪೌಡರ, ಸ್ಟಿಕ್ಕರ್, ಕನ್ನಡಿ, ಬಳೆ ಇದರಲ್ಲೇ ಎಲ್ಲಾ

ನನಗಿನ್ನು ನಿರಂತರ ನಡೆದಿದೆ ಪ್ರಯತ್ನ
ಅರಿಯ ಬೇಕಾಗಿತ್ತು ಕಲಿಸುತ್ತಿದ್ದುದಾದರೂ ಏನು ನಾಗರತ್ನ?

                            – ಉಮಾ ಭಾತಖಂಡೆ

Leave a Reply