ನೀನಾಗ ಸಿಕ್ಕಿದ್ದರೆ

ನೀನಾಗ ಸಿಕ್ಕಿದ್ದರೆ
ನಿನ್ನ ಮನಸ್ಸಿನ ಮಂದಿರದಲ್ಲಿ ಬಂದಿನಾನಾಗಿರುತ್ತಿದ್ದೆ
ನಾ ಸಾಗುವ ಬಂಡಿಯ ಸಾರಥಿ ನೀನಾಗಿರುತ್ತಿದ್ದೆ
ಹೃದಯ ಬಡಿತದಲ್ಲಿ ನಿನ್ನ ಹೆಸರ ನಾ ಮೂಡಿಸುತ್ತಿದ್ದೆ
ಸುಂದರ ಮನದ ಮಹಲಿನ ತೋಟದಲ್ಲಿ ಪುಷ್ಪನೀನಾಗಿರುತ್ತಿದ್ದೆ
ಸಾಧನೆಯ ಹಾದಿಯಲ್ಲಿ ಗರಿಕೆದರಿ ಬಾನ ಅಂಚಿನಲಿ ಹಾರಾಡುತ್ತಿದ್ದೆ
ಜೀವನದ ಸುಂದರ ಕ್ಷಣ ಸಿಹಿಯಾಗಿ ಸವಿಯುತ್ತಿದ್ದೆ
ಫಲ್ಲವಿಸುವ ನನ್ನ ಭಾವನೆಗಳಿಗೆ ನೀ ರಾಗವಾಗುತ್ತಿದ್ದೆ
ಉತ್ಸಾಹದಿ ಚಿಮ್ಮುವ ಕಾರಂಜಿ ನಾನಾಗುತ್ತಿದ್ದೆ
ನಾ ಬರೆವ ಕವನದ ಅಕ್ಷರ ಅಕ್ಷರಕ್ಕೂ ಲೇಖನಿ ನೀನಾಗುತ್ತಿದ್ದೆ
ಪ್ರತಿಧ್ವನಿಸುವ ಇಂಚರಕೆ ಇನಿದನಿ ನಾನಾಗಿರುತ್ತಿದ್ದೆ
ಬದುಕಿನ ದೋಣಿಯಲಿ ದಡ ಸೇರಿಸುವ ಅಂಬಿಗ ನೀನಾಗುತ್ತಿದ್ದೆ
ದಡ ಗುಂಟ ನಾ ನಿನ್ನ ಸಂಗ ಬಿಡದೇ ಕೈಹಿಡಿಯುತ್ತಿದ್ದೆ.

Leave a Reply