ಪೋಷಣೆ

ಪೋಷಣೆ
ಮಕ್ಕಳನು ಬೆಳೆಸುವದು ಇಂದು ಬಲು ಕಷ್ಟ…
ನೂರೆಂಟು ಸೆಳೆತಗಳು, ಎಲ್ಲಾ ಅವರಿಷ್ಟ…
ಆನೆ ನಡೆದದ್ದೇ ದಾರಿ.. ತಡೆಯುವವರಾರು?
ತಡೆಯದಿದ್ದರೆ ಮಾತ್ರ ಅಪಾಯ ಹಲವಾರು ….

ಅಂದು- ಇಂದು
ಸತ್ಯ ವಾಕ್ಯಕೆ ಮೆಚ್ಚಿ ಅಂದು ಹುಲಿರಾಯ
ಪುಣ್ಯಕೋಟಿಯ ಉಳಿಸಿ ಮಾಡಿದನು ಸಹಾಯ…
ಸತ್ಯ ನುಡಿದರೆ ಇಂದು ಏನಾಗಬಹುದು?
ಬಾಪುಜಿಯವರಂತೆ ಬಲಿಯಾಗಬಹುದು!

Leave a Reply