ಪ್ರಕೃತಿ ಹೆಣ್ಣು

ಪ್ರಕೃತಿ  ಹೆಣ್ಣು

ಪ್ರಕೃತಿ ಮಾತೆಯೇ ಹೆಣ್ಣಾಗಿ
ಬಂದಿಳಿದಿಹಳು ಈ ಇಹದಲಿ
ಕಷ್ಟಕೋಟಲೆ
ನಿಷ್ಠೂರ ಕಾಟಗಳಲೇ
ಹಣ್ಣಾಗಿ ಸಣ್ಣಾಗಿ
ಮನಮಿಡಿಯುತಿಹಳು

ಬಿರುಸಿನಾ ಬೇಗುದಿಗೆ
ಮನವ ತಲ್ಲಣಿಸಿ
ಇನಿತು ಇನಿತಾಗಿ
ತನ್ನ ತಾನೇ ಕರಗುತಿಹಳು

ಕಾರುಣ್ಯದ ನೋಟಕೆ ಹಪಹಪಿಸಿ
ಪ್ರೇಮದಾ ಸಿಂಚನಕೆ ಪರಿತಪಿಸಿ
ತನ್ನೊಡಲ ಕುಡಿಗೆ ಉಣಬಡಿಸಿ
ತಾನಿರುತಿಹಳು ಉಪವಾಸ ವನವಾಸದಲಿ

ಹೆಣ್ಣಿಗೆ ರಜ ಎಂಬುದಿಲ್ಲ
ಒಳಹೊರಗೂ ದುಡಿದು
ಒಳಹೊರ ಉಸಿರು ಒಂದಾಗಿಸೆ
ಬಾಳ ಬೆಳಗಬೇಕೆಂಬಾಸೆ

ಹೆಣ್ಣು ಹುಟ್ಟಿ ತಾ
ಎರಡು ಮನೆಯ ಬೆಳಗುವಳು
ತನ್ನ ಬಾಳ ಕಹಿ ಮರೆತು
ಬಾಳಲಿ ಬೆಳದಿಂಗಳಾಗುವಳು

Leave a Reply