ರಾಜಕಾರಣ

ರಾಜಕಾರಣ
ರಾಜಕಾರಣ ಇಂದು ಬಹಳಷ್ಟು ಹೊಲಸು…
ದೌರ್ಜನ್ಯ – ಶೋಷಣೆ ಬಹಳಷ್ಟು ಸಲೀಸು…
ಮೋಸ- ವಂಚನೆಗೂ ಇಲ್ಲ ಕಡಿವಾಣ…
ಉರಿವ ಮನೆ ಗಳಗಳನು ಎಳೆದವನೇ ಜಾಣ…
(ಕೊನೆಯ ಸಾಲು ವ್ಯಾಖ್ಯಾನ ಅಲ್ಲ… ವಿಡಂಬನೆ (Satire ). ಒಳ್ಳೆಯವರನ್ನು ಬಲಹೀನರು ಎಂದೂ, ಬಲಹೀನರ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಸ್ವಾರ್ಥ ಸಾಧಿಸಿಕೊಳ್ಳುವವರನ್ನು ಚಾಣಾಕ್ಷರೆಂದೂ ಬಿಂಬಿಸುವದರ ಬಗ್ಗೆ ಒಂದು punch. ಬೆರೆವರ ಮನೆಗೆ ಹತ್ತಿದ ಬೆಂಕಿ ನಂದಿಸುವದರ ಬದಲು ಸಿಕ್ಕಷ್ಟು ಗಳಗಳನ್ನೂ ಎಳೆದುಕೊಂಡು ಪಾರಾಗುವ ಬುದ್ಧಿ…)–ಗಳಗಳು– ಮನೆಯ ಸೂರಿನ ಆಧಾರಕ್ಕಾಗಿ ಬಿದಿರುಗಳು.

ಧರ್ಮ
ಒಂದೊಂದು ಧರ್ಮಕೂ ಒಂದೊಂದು ರೀತಿ
ಇದ್ದರೆ ಇರಲಿಬಿಡಿ… ಅವರವರ ಪ್ರೀತಿ…
ಧರ್ಮ – ಜಾತಿಯ ಹೆಸರಿನಲಿ ರಂಪಾಟ ಮಾಡಿ…
ಸವಿಯಾದ ಹಾಲಿನಲಿ ಹುಳಿ ಹಿಂಡಬೇಡಿ…

 

Leave a Reply