ತರಾವರಿ ಈ ಬದುಕು

ಬದುಕು ದುಸ್ತರವೆನಿಸೆ
ಮನದ ಬೆನ್ನು ಸವರಿ
ನುಡಿವೆ
ಹೆದರುವೆ ಏಕೆ
ಬದುಕೇನು ಸ್ಥಿರವೆ?

ತರವೋ ದುಸ್ತರವೋ
ಜೀವಿಸಿಬಿಡೊಮ್ಮೆ
ಇರುವುದೊಂದೇ ಬದುಕು
ಈ ಜನುಮಕೆ..
ಕಟ್ಟಿಡು ಚಿಂತೆ
ಕಂತೆಗಳ
ಮರು ಜನುಮಕೆ

ಕಂಡ ದಾರಿಯಲಿ
ಸಾಗುತ್ತಾ
ಕಾಣದ ದಾರಿಗಾಗಿ
ಹುಡುಕಾಡುತ್ತಾ
ನೇರ ದಾರಿಯ
ಕಬಳಿಸುತ್ತಾ
ಅಡ್ಡ ದಾರಿಯ
ಅನುಭವಿಸುತ್ತಾರೆ
ನಿಲ್ಲದಂತೆ ನಡೆ

ಬದುಕು ಅನಿವಾರ್ಯ
ಉಸಿರಿರುವವರೆಗೂ…
ಜಯಿಸೇ ಬಿಡುವ
ಈ ಬದುಕ
ಸಾವಿನಾಚೆ ಏನುಂಟೋ
ಅರಿತವರಾರು!

Leave a Reply