ವೇಗ

ವೇಗ
ಇಂದು ಮೊದಲನೇ ಭೇಟಿ, ನಾಳೆಯೇ ಮದುವೆ
ನಾಡಿದ್ದು ಡಿವೋರ್ಸ್ ಗೆ ಬಂದದ್ದು ನಿಜವೇ …
ಹೇಗೆಂದು? ಏಕೆಂದು? ಕೇಳುವದು ಸಲ್ಲ…
ಫೆವಿಕಾಲು ಹೃದಯಗಳ ಜೋಡಿಸುವದಿಲ್ಲ….

ಹಗರಣ
ಎಲ್ಲೆಲ್ಲಿ ಕೇಳಿದರೂ ಹಗರಣದ ಸುದ್ದಿ.
ನಿಜವಾಗಿ ಕಂಡಿತೇ ದೇಶ ಅಭಿವೃದ್ಧಿ?
ಇಂದು ಬದುಕಿದ್ದರೆ ಆ ನಮ್ಮ ಬುದ್ಧ…
ಶುದ್ಧ ರಾಜಕಾರಣಿ ಮನೆಯ – ಸಾಸುವೆಯ ಕೇಳುತಿದ್ದ!

(ಟಿಪ್ಪಣಿ– ಕಿಸಾ ಗೌತಮಿ ಪುತ್ರ ಶೋಕ ಪರಿಹಾರಕ್ಕಾಗಿ ಬುದ್ಧನ ಬಳಿ ಬಂದಾಗ ಅವರು ಅವಳಿಗೆ ಸಾವು ಇಲ್ಲದ ಮನೆಯ ಸಾಸುವೆ ತಂದರೆ ಪರಿಹಾರ ಸಿಗುತ್ತದೆ ಎಂದು ಹೇಳಿ ಸಾವು ಅನಿವಾರ್ಯ ಎಂಬುದನ್ನು ಮನಗಾಣಿಸುತಾರೆ. ಇದರ ಹಿನ್ನೆಲೆಯಲ್ಲಿ ಸಾವಿಲ್ಲದ ಮನೆ ಹೇಗೆ ಇರುವದಿಲ್ಲವೋ ಹಾಗೆ ಇಂದಿನ ರಾಜಕಾರಣದಲ್ಲಿ ಹಗರಣವಿಲ್ಲದ ಮನೆಯೂ ದುರ್ಲಭ ಎಂಬುದು ತಾತ್ಪರ್ಯ )

Leave a Reply