ಯಾರು ಬರುವರೋ….!

ಯಾರು ಬರುವರೋ….!
ಎದೆಯ ಕದವನು ಸರಿಸಿ ಸ್ವಲ್ಪವೇ
ಮೆಲ್ಲ ನೀ ಅಡಿ ಇಟ್ಟಿಯೇ
ಅಮರಿಕೊಂಡಿಹ ಕತ್ತಲೆಲ್ಲವು
ಚದುರಿ ಹೋಯಿತು
ನೀ ಸುರಿಸಿಹ ಬೆಳಕಿಗೆ ॥
ಪ್ರಖರವಾಗಿಹ ನಿನ್ನ ಬೆಳಕಲಿ
ಬದುಕು ಮುಂದಡಿ ಇಟ್ಟಿದೆ,
ಕವಲು-ತಿರುವನು ದಾಟಿ ಮುಂದಕೆ
ಬದುಕು ಸಾಗಿದೆ ಮನ ಮರೆಸುತಾ
ಜೀವದಾ ಮಧು ಹೀರುತಾ ॥
ಮನದ ನೆಮ್ಮದಿ ಸ್ಥಿರಗೊಳುವ ಮುನ್ನವೆ
ಮರುಕ ತೋರದೆ ಹೊರಟಿಹೆ
ಕದವ ಮುಚ್ಚಿ ಇಳಿದು ಹೋದೆ
ತೊರೆದು ಎನ್ನಯ ಪ್ರೀತಿಯ
ಹೇಳದೇ ಇನಿತೂ ಕಾರಣ..! ॥
ಹೊರಗೆ ಬೆಳಕು ಹರಡಿಕೊಂಡರು
ಒಳಗೆ ಅಮರಿದೆ ಕತ್ತಲು
ಯಾರು ಬರುವರೋ,
ತಿಮಿರ ಕಳೆಯುತ
ಮನಕೆ ಅಮೃತ ಉಣಿಸಲು ॥
-ಹೊಸ್ಮನೆ ಮುತ್ತು.
Leave a Reply