ರೇಷ್ಮೆ ಮೈಯ ಉಣುಗಲ್ಲದ ಉಣುಗು

ರೇಷ್ಮೆ ಮೈಯ ಉಣುಗಲ್ಲದ ಉಣುಗು…
ಭೂಮಿಗೆ ಮೊದಲ ಮಳೆಯ ಸಿಂಚನವಾಗುತ್ತಿದ್ದಂತೆ ಪರಿಸರದಲ್ಲೇನೋ ಹೊಸ ಜೀವ ಸಂಚಾರ ನೆಲದ
ಪ್ರಾಕೃತಿಕ ಸೌಂದರ್ಯ ಆಗ ಇಮ್ಮಡಿಗೊಳ್ಳುತ್ತದೆ ಆಗ ಸೃಷ್ಟಿಯ ಈ ಸುಂದರ ರೂಪವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಆನಂದ. ಹಲವಾರು ವಿಸ್ಮಯಗಳ ತಾಣವಾದ ಪ್ರಕೃತಿಯಲ್ಲಿ ಹಲವು ತರದ ಸಸ್ಯಗಳು ಜೀವಿಗಳು ಸೂಕ್ತಕಾಲದಲ್ಲಿ ಪ್ರಕಟಗೊಳ್ಳುತ್ತವೆ. ಹೀಗೆ ಕಾಣಿಸಿಕೊಳ್ಳುವ ಸೂಕ್ಷ್ಮ ಜೀವಿಗಳಲ್ಲಿ ನುಣುಪಾದ ‘ರೇಷ್ಮೆ’ ಮೈಯ ಕೀಟವೂ ಒಂದು. ಎಂತಹವರನ್ನೂ ತನ್ನತ್ತ ಸೆಳೆಯಬಲ್ಲ ಗಾಢ ಬಣ್ಣದ ಮೃದು. ಮೃದುವಾದ ಶರೀರ ಹೊಂದಿರುವ ಈ ಕೀಟಕ್ಕೆ ಆಂಗ್ಲ ಭಾಷೆಯಲ್ಲಿ ರೆಡ್ ವೆಲ್ವೆಟ್ ಮೈಟ್ಸ್ (Red velvet mites)

ಎಂಬ ಹೆಸರು ಅದೊಂದು ಉಣುಗಿನ ಜಾತಿಗೆ ಸೇರಿದ ಕೀಟ.
ಮಳೆಗಾಲದ ಪ್ರಾರಂಭದಲ್ಲಿ ಕಾಣಸಿಗುವ ಇವು ಬಹಳ ಸೂಕ್ಷ್ಮ ಸಂವೇದಿ ಗುಣವುಳ್ಳ ಜೀವಿಗಳು. ಕೊಂಚ ಸ್ಪರ್ಶಿಸಿದರೂ ಸಾಕು ಕೈಕಾಳುಗಳನ್ನು ಮಡಿಚಿ ಪುಟ್ಟ ಉಂಡೆಯಂತಾಗಿ ಬಿಡುತ್ತವೆ. ನೆಲದ ಮೇಲೆ ಹರಿದಾಡುವ ಇವು ಕೊಂಚ ಮಳೆ ಕಡಿಮೆಯಾದರೂ ಮತ್ತೆ ಕಣ್ಣಿಗೆ ಕಾಣಿಸದಂತೆ ಎಲ್ಲೋ ಮರೆಯಾಗಿ ಬಿಡುತ್ತವೆ. ನಾವು ಆಡು ಮಾತಿನಲ್ಲಿ ಕೆಂಪು ಬಣ್ಣದ ಈ ಕೀಟವನ್ನು ‘ರೇಷ್ಮೆ ಹುಳು’ ಅಂತ ಕರೀತಿದ್ವಿ. ಅಂಗೈಯಲ್ಲಿಟ್ಟು ಅದರ ಮೃದು ದೇಹವನ್ನು ಸ್ಪರ್ಶಿಸಿ ಸಂಭ್ರಮಿಸುವುದು ಅದೊಂದು ಬೇರೆಯದೇ ಆದ ಖುಷಿ ಅದನ್ನು ಬೆಂಕಿ ಪೊಟ್ಟಣದಲ್ಲಿಟ್ಟು ಸಾಕುವ ಮುಗ್ಧ ಸಾಹಸ ಬಾಲ್ಯದ್ದು. ಅದಕ್ಕೆ ಅಲ್ಲಿನ ವಾತಾವರಣ ಸರಿ ಹೋಗದೆ ಸತ್ತಾಗ ಪೆಚ್ಚಾಗುತ್ತಿದ್ದೆವು.
ಈ ರೇಷ್ಮೆ ಹುಳು ಕಾಡು ಪ್ರದೇಶಗಳು ಮತ್ತು ಕಾಡಿನ ಮಣ್ಣು ಕಸ, ಹ್ಯೂಮಸ್, ಪಾಚಿ ಮತ್ತು ಸಾವಯವ ಮಣ್ಣಿನಂತಹ ಭೂಮಿಯ ಇತರ ಆವಾಸಸ್ಥಾನಗಳಲ್ಲಿಯೂ ಕಂಡು ಬರುತ್ತವೆ. ವರ್ಷದ ಬಹುಪಾಲು ಮಣ್ಣಿನ ಕೆಳಗೆ ವಾಸಿಸುವ ಈ ಜೀವಿಗಳು, ಮಳೆ ಪ್ರಾರಂಭವಾಗುವವರೆಗೂ ಭೂಗತವಗಿದ್ದು ನಿರಂತರ ಮಳೆ ಹೆಚ್ಚಿನ ಆದ್ರ್ರತೆಯ ಸಮಯದಲ್ಲಿ ಮಣ್ಣಿನ ಮೇಲೆ ಚಲಿಸುತ್ತವೆ. ಕೆಂಪು ವೆಲ್ವೆಟ್ ಹುಳುಗಳು ಮಣ್ಣು ಮತ್ತು ಎಲೆ ಕಸ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಈ ಹುಳುಗಳು ಇತರ ಹುಳುಗಳು ಮತ್ತು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾವನ್ನು ತಿನ್ನುವ ಸಣ್ಣ ಆತ್ರ್ರೋಪಾಡ್ ಗಳಿಗೆ ಆಹಾರವನ್ನು ನೀಡುವುದರಿಂದ ಅವು ಮಣ್ಣಿನ ಪದರದಲ್ಲಿ ಕೊಳೆಯುವ ಪ್ರಮಾಣವನ್ನು ಹೆಚ್ಚಿಸುತ್ತವೆ.
(Red Velvet Mites are an integral part of the soil and leaf litter ecosystem. Since these mites feed on other mites and small arthropods that would eat fungus and bacteria, they increase the rate at which decomposition occurs in the soil layer)
ಮೇಲ್ನೋಟಕ್ಕೆ ಗೊತ್ತಾಗದ ರೀತಿ ಸೂಕ್ಷ್ಮವಾಗಿ ಚಲಿಸುವ ನುಣುಪಾದ ಕೆಂಪು ಬಣ್ಣದ ಈ ಪುಟ್ಟ ಜೀವಿಗಳನ್ನು ವರ್ಷ ಋತುವಿನ ಈ ಸಮಯದಲ್ಲಿ ನೀವು ಹೊರಾಂಗಣದಲ್ಲಿದ್ದರೆ ಗಮನಿಸಬಹುದು. ಇನ್ನು ಕಾಡಿನತ್ತ ನಡೆದರಂತೂ ಅಲ್ಲಿನ ತಗ್ಗು- ದಿನ್ನೆಗಳಲ್ಲಿ ಮರ ಹಸಿರುಗಳಲ್ಲಿ ಅನೇಕ ಸೂಕ್ಷ್ಮ ಜೀವಿಗಳು, ಚಿತ್ರ, ವಿಚಿತ್ರವಾದ ಪ್ರಕೃತಿಯ ತುಣುಕುಗಳೆನ್ನಬಹುದಾದ ಕ್ರಿಮಿ, ಕೀಟಗಳು ಗೋಚರಿಸುತ್ತವೆ. ಪರಿಸರಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಈ ಜೀವಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ಗಮನಿಸುವುದೇ ಹೆಚ್ಚು ಸೂಕ್ಷ್ಮ ವರ್ಷ ಕಾಲದ ಆರಂಭಕ್ಕೆ ಹಾಜರಿ ಹಾಕಿ ಕೆಲವೇ ದಿನಗಳಲ್ಲಿ ಕಣ್ಮರೆಯಾಗುವ ಈ ಸೊಗಸಿನ ಜೀವಿ ನೋಡಲು ಇನ್ನು ಕೆಲವೇ ದಿನ ಬಾಕಿ ಇದೆ. ಗುಂಪಾಗಿ ಮರಿಗಳೊಡನೆ ಹರಿದಾಡುವ ಅವುಗಳನ್ನು ನೋಡುವುದೇ ಒಂದು ಸೊಗಸು.

 

ಹೊಸ್ಮನೆ ಮುತ್ತು

Leave a Reply