ಯಾಕ ಹಿಂಗ?

ಯಾಕ ಹಿಂಗ?
ನನಗ ಅನಿಸಿದ ಹಂಗ ಭಾಳ ಜನರಿಗೆ ದಿನನಿತ್ಯದ ಕೆಲಸದಾಗ ಯಾವುದರ ಸಂಗತಿ ನಮಗ ಸರಿ ಬರಲಿಲ್ಲ ಅಂದರ “ಯಾಕ ಹಿಂಗ?” ಅನ್ನೋ ಪ್ರಶ್ನೆ ರೂಪದ ವಾಕ್ಯ ನಮ್ಮ ಮನಸಿನಾಗ ಭಾಳ ಕಾಡತದ. ಇದು ಎಲ್ಲರ ಅನುಭವಕ್ಕ ಬಂದ ಸಂಗತಿ. ಈ ಸಣ್ಣ ಅನಸೋ ಪ್ರಶ್ನಿ, ರಾಷ್ಟ್ರಪತಿಗಳಿಂದ ಹಿಡಿದು ಜನಸಾಮಾನ್ಯನವರೆಗೂ ಎಲ್ಲರ ಕಾಡುವುದೇ.
ಹೆಂಡತಿಗೆ “ನನ್ನ ಗಂಡ ಯಾಕ ಹಿಂಗ?” ಗಂಡನಿಗೆ “ನನ್ನ ಹೆಂಡತಿ ಯಾಕ ಹಿಂಗ?” ಸಾಲಿ ಹೆಡ್ ಮಾಸ್ಟರ್ಗೆ “ನಮ್ಮ ಸಾಲಿ ಮಕ್ಕಳು ಯಾಕ ಹಿಂಗ?” “ನಮ್ಮ ಕೆಳಗಿರುವ ಉಳಿದ ಮಾಸ್ಟರ ಮಂದಿ ಎಲ್ಲಾ ಯಾಕ ಹಿಂಗ?” ಹಿಂಗ ಈ ಸಮಸ್ಯೆ ಜಗತ್ತಿನ ತುಂಬಾ ಹಬ್ಬಿಕೊಂಡು ಬಿಟ್ಟದ.
ಡೊನಾಲ್ಡ್ ಟ್ರಂಪಿನ ಹಿಡಿದು ಕೊರಿಯಾದ ಕಿಮ್ ಜಿನ್ ಉನ್ನವರೆಗೂ ನರೇಂದ್ರ ಮೋದಿ ಅವರಿಂದ ರಾಹುಲ್ ಗಾಂಧಿವರೆಗೂ “ಯಾಕೆ ಹಿಂಗೆ?” ಅನ್ನುವ ಪ್ರಶ್ನೆ ಎಲ್ಲರ ಕಣ್ಣ ಮುಂದೆ ನಿಲ್ಲುವುದು.” “ಯಾಕೆ ಹೀಗೆ” ಅನ್ನೋ ಪ್ರಶ್ನಿ ಬೆನ್ನಹತ್ತಿದಾಗಲೇ ಹೊಸ ವಿಚಾರ, ಹೊಸ ವಿಚಾರ, ಹೊಸ ಐಡೀಯ, ಹೊಸ ರೀತಿಯ ವಿನ್ಯಾಸ, ಹೊಸ ವಿಶ್ಲೇಷಣೆ ಕ್ರಮ, ಪಡೆಯುತ್ತ ಹೊಸ ಸೃಜನಶೀಲತೆಯ ಅಡಿಪಾಯ ಹಾಕಲ್ಪಡುವುದು. ಹೊಸ ವಿಚಾರ ಬರಬೇಕೆಂದ್ರೆ ಯಾಕೆ ಹೀಗೆ ಅನ್ನೋ ಹಳೆ ಪ್ರಶ್ನೆ ಹಾಕಲೇಬೇಕು. ಹಳೆಯ ಪ್ರಶ್ನೆಯಾದರೂ ಕಾಲಮಾನಕ್ಕೆ ತಕ್ಕಂತೆ, ಉತ್ತರಗಳು, ಪರಿಹಾರಗಳು ಬೇರೆ ಬೇರೆಯಾಗಿರುತ್ತವೆ. ಆದ್ದರಿಂದ “ಯಾಕೆ ಹೀಗೆ” ಅನ್ನೋದೇ ಚಿರಂಜೀವಿಯಾದ ಪ್ರಶ್ನೆ. ಯಾಕೆ ಅನ್ನೋ ಹಿಂದೆ, ಕುತೂಹಲ, ಆಸಕ್ತಿ ಆವಿಷ್ಕಾರ, ಸತ್ಯಶೋಧನೆಗಳ ಸೆಲೆ ಅಡಗಿರುತ್ತದೆ. ವಿಚಾರ ಮತ್ತು ಆಚಾರಗಳ ಅಂತರದಲ್ಲಿಯೇ ಯಾಕೆ ಹೀಗೆ ಅನ್ನೋ ಪ್ರಶ್ನಿ ಅಡಗಿಕುಳಿತಿರುತ್ತದೆ.
ಲೌಕಿಕ, ಅಲೌಕಿಕ, ಭೌತಿಕ, ನೈಸರ್ಗಿಕ ಮಾನವ ನಿರ್ಮಿತ, ಇವೆಲ್ಲಗಳ ನಡುವೆ ಇರುವ ವ್ಯತ್ಯಾಸಗಳ ಹಿಮದಿರುವ ಲಾಭ, ಹಾನಿ ಇತ್ಯಾದಿ ಎಲ್ಲವೂ ಗುಪ್ತಗಾಮಿನಿಯಾಗಿರುತ್ತೇವೆ ಎಂದರೆ ನಮಗೆ ಅದೇ ವಿಚಾರಗಳಿಂದ ಪರಿಹಾರ ಹುಡುಕಲು ಆಗುವುದಿಲ್ಲ. ಅಣುಬಾಂಬ್ ಹುಡುಕಿ, ಹಾಕಿ ಶಾಂತಿ ಸಿಕ್ಕಾಗ, ಪರಿಹಾರ ಸಿಕ್ಕಿತು ಎಂದು ಭಾವಿಸಿದಾಗ, ಎಲ್ಲ ಚಿಕ್ಕಪುಟ್ಟ ದೇಶಗಳು ಸಹ ಅಣುಬಾಂಬ್ ತಯಾರಿಸಬಲ್ಲವು ಎಂದು ಗೊತ್ತಾದಾಗ, ಅಣು ಬಾಂಬ್ ಸಮಸ್ಯೆಗೆ ಪರಿಹಾರವಲ್ಲ ಅಂದಾಗ ಮತ್ತೆ ಯಾಕೆ ಹೀಗೆ ಬರುವುದೇ. ಇದು ದುರಂತ. ಇದೇ ಉದಾಹರಣೆಯನ್ನು, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸಬಹುದಾಗಿದೆ. ಸಿದ್ಧಾಂತಗಳ ಭಿನ್ನತೆಯ ಒಡಕಿನಲ್ಲಿ ಯಾಕೆ ಹೀಗೆ ಅನ್ನುವ ಪರಿಣಾಮವೇ ಕ್ರಾಂತಿ ಬೀಜ ಮೊಳಕೆ ಒಡೆಯುತ್ತದೆ. ಕ್ರಾಂತಿಯಲ್ಲಿ ಹಿಂಸೆ ಇರುತ್ತದೆ ಇಲ್ಲವೋ ಅದು ಬೇರೆ ಮಾತು. ಅದು ಹಿಂಸೆಯ ಕಲ್ಪನೆ, ಪ್ರಕಾರದ ಮೇಲೆ ಅವಲಂಬಿಸಿದೆ.
ಕಲಿಯುತ್ತಿರುವ ಒಬ್ಬ ವಿದ್ಯಾರ್ಥಿಗೆ ಯಾಕೆ ಹೀಗೆ ಅನ್ನುವ ಪ್ರಶ್ನೆ ಅಗಾಧವಾದ ಜ್ಞಾನದ ಬಾಗಿಲುಗಳನ್ನು ತೆಗೆಯುವ ಕೀಲಿ ಕೈ ಆಗಬಲ್ಲದು. ಜ್ಞಾನದ ಬಾಗಿಲು ತೆಗೆಯುತ್ತಾ ಹೋದಂತೆ, ಸಂಪತ್ತಿನ ಶೇಖರಣೆ, ವಿತರಣೆ, ಬಳಕೆ ಮತ್ತು ಅನಿವಾರ್ಯವಾದ ಅಪಾಯಗಳು ಸಹ ನಮಗೆ ಗೋಚರಿಸುತ್ತ ಹೋಗುವುದು ನಮಗಿಗಾಲೇ ಅನುಭವಕ್ಕೆ ಬಂದ ಸಂಗತಿ. ಇದು ಎಲ್ಲ ದೇಶಗಳಲ್ಲಿ ಯಾವುದೇ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ನೋಡಬಹುದಾಗಿದೆ.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ “ಯಾಕೆ ಹೀಗೆ” ಅನ್ನುವುದೇ ಶಿಕ್ಷಣದ ನೈಲ್ ನದಿಯಾಗಬಹುದಾಗಿದೆ. ಈಜಿಪ್ಟ್ ನಂತ ಬರುಡು ನಾಡಿನಲ್ಲಿ ನೈಲ್ ನದಿಯ ಅಕ್ಕಪಕ್ಕದಲ್ಲಿ ನಾಗರಿಕತೆ ಹುಟ್ಟಿ ಬೆಳೆದ ಹೆಜ್ಜೆಗಳು ಪ್ರಥಮ ಅನ್ನುವುದು ನಿಜ. ಹಾಗೆಯೇ ನಮ್ಮ ಪಠ್ಯಕ್ರಮದಲ್ಲಿ ಇಂಥಹದೊಂದು ವ್ಯವಸ್ಥೆ ಶಿಸ್ತುಬದ್ಧವಾಗಿ ಒಡಮೂಡಬೇಕಾಗಿದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಐತಿಹಾಸಿಕ ಪ್ರಥಮ ಯಶಸ್ವಿ ಪ್ರಯತ್ನ ಸದ್ದು ಗದ್ದಲವಿಲ್ಲದೆ ನಡೆಯುತ್ತಿರುವುದು ಹುಬ್ಬಳ್ಳಿಯ ಏಐಇ ಟೆಕ್ನಾಲೋಜಿಕಲ್ ಯೂನಿವರ್ಸಿಟಿಯ ಬಿವಿಬಿ ಇಂಜನೀಯರಿಂಗ ಕಾಲೇಜಿನಲ್ಲಿ ಅಂದರೆ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಪ್ರತಿಷ್ಠಿತ ಐಐಟಿಗಳಲ್ಲಿ ಸಹ ಇಲ್ಲ. ಯಾಕೆ ಹೀಗೆ ಅನ್ನುವುದೇ ಇಂಜನೀಯರಿಂಗ್ ಏಕ್ಸಪ್ಲೋರೇಷನ್ ಅನ್ನುವ ವಿಷಯದ ಅಡಿಯಲ್ಲಿ. ಆಸಕ್ತಿ ಇದ್ದೋ ಇಲ್ಲದೋ ಇಂಜನೀಯರಿಂಗ್ ಶಿಕ್ಷಣರಂಗಕ್ಕೆ ಬಂದ ಪ್ರಥಮ ಸೆಮಿಸ್ಟರ್‍ನ ವಿದ್ಯಾರ್ಥಿಗಳಿಗೆ ಯಾಕೆ ಹೀಗೆ ಅಂತ ಪ್ರಶ್ನೆ ಬಂದಾಗಲೇ ಆಸಕ್ತಿ ಇಲ್ಲದವರಲ್ಲಿ ಆಸಕ್ತಿ ಕುದುರುವಿಕೆ, ಇದ್ದವರಲ್ಲಿ ಹೆಚ್ಚು ತಿಳಿಯುವ ಹಂಬಲವೇ ಕಲಿಕೆಗೆ ಪ್ರೇರಣೆ ಒದಗಿಸುವುದು. ಆಗ ಕಲಿಕೆ ಸರಳ, ಶೀಘ್ರ ಅರ್ಥಪೂರ್ಣವಾಗುವುದು. ಇದೊಂದು ವೈಜ್ಞಾನಿಕವಾದ ಅಭಿಯಾಂತ್ರಿಕ ಸತ್ಯಾನ್ವೇಷಣೆಯಾಗಿದ್ದು ಪ್ರತಿ ವಿದ್ಯಾರ್ಥಿಯು ಒಂದು ರೀತಿಯಿಂದ ಹೊಸ ಜ್ಞಾನದ ನೆಲಗಳ ಹುಡುಕುವ ಮರಿ ಕೊಲಂಬಸ್ ಅಥವಾ ವಾಸ್ಕೋ ಡಾ ಗಾಮಾ ಆಗಲು ಸಾಧ್ಯ. ಕಲಿಸುವ ಪ್ರಾಧ್ಯಾಪಕರಿಂದ ಹಿಡಿದು ಕಲಿಯುವ ವಿದ್ಯಾರ್ಥಿಗಳವರೆಗೆ ಕುತೂಹಲಭರಿತವಾದ ಯಾಕೆ ಹೀಗೆ ಅನ್ನುವ ವಿದ್ಯುತ್ಪ್ರವಾಹ ಮನದ ಬೆಳಕು ಹೆಚ್ಚಿ ಆಗುವಂತೆ ಮಾಡುತ್ತದೆ. ಪ್ರತಿ ವಸ್ತುವಿನ, ಪ್ರತಿ ಯಂತ್ರದ, ಪ್ರತಿಚಲನೆಯ ಹಿಂದಿರುವ ವೈಜ್ಞಾನಿಕ ಸತ್ಯಗಳ ದರ್ಶನವನ್ನು ಮನೋರಂಜನೆ, ಜ್ಞಾನರಂಜನೆಗಳ ಮೂಲಕ ಪಡೆಯುವುದು ಇಲ್ಲಿ ನಿತ್ಯ ಸಂಗತಿ. ನಾಲ್ಕು ವರ್ಷಗಳ, ಎಂಟು ಸೆಮಿಸ್ಟರ್‍ಗಳ ಜ್ಞಾನ ಯಾನದಲ್ಲಿ ಎಲ್ಲವೂ ಹೊಸ ನೆಲಗಳ ಸಂಶೋಧನೆಯೇ.
ಈ ಅಭಿಯಾಂತ್ರಿಕ ಜ್ಞಾನ ಅನ್ವೇಷಣೆಯ ಮುಂಚೂಣಿಯಲ್ಲಿ ಇರುವ ವಿಭಾಗವೇ Centre for Engineering Exploration
& Research_(CEER)ಈ ಸಿಯರ್‍ನ ಇನ್ನೊಂದು ರೂಪ ಋಷಿ ಅಂತ ಅನ್ನಬಹುದಾಗಿದೆ. ಈ ಗುರುಕುಲದ ಪ್ರಮುಖ ಋಷಿ ಡಾ. ಗೋಪಾಲ್ ಜೋಶಿ ಒಂದು ರೀತಿಯ ಆಧ್ವರಿಯೂಗಳು. ಗುರುಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಅವರು ಉಭಯತರ ಕನಸು ನನಸು ಮಾಡಲು ಕಂಕಣಬದ್ಧರಾದ ಉತ್ಸಾಹಿ ಯುವ ಪ್ರಾಧ್ಯಾಪಕ ವೃಂದ. ಇದು ಯಾಕೆ ಮುಖ್ಯವಾಗುತ್ತದೆ ಅಂದರೆ ಒಳ್ಳೆಯ ವಿಚಾರ ಮುಖ್ಯ. ನಮ್ಮ ದೇಶದಲ್ಲಿ ವಿಚಾರಗಳಿಗೆ ಪೇಟೆಂಟ್ ಇಲ್ಲ. ಒಳ್ಳೆಯದರ DNAಮೂಲಗಳು ಎಲ್ಲಿಯಾದರೂ ದಾಖಲೆ ಆಗಬೇಕು. ಒಳ್ಳೆಯ ವಿಚಾರ ಎಲ್ಲ ಕಡೆ ಮುಕ್ತವಾಗಿ ಹಬ್ಬಬೇಕಾದರೂ ಆ ವಿಚಾರಗಳಿಗೆ ಸಲ್ಲಬೇಕಾದ ಗೌರವ ಸಲ್ಲಲೇಬೇಕು. ಹಾಗೆ ಆ ವಿಚಾರಗಳು ಮೂರ್ತ ಸ್ವರೂಪಕ್ಕೆ ಬಂದು ಅನುಷ್ಠಾನಕ್ಕೆ ಬರುವುದು ಉತ್ಸಾಹಿ ಕ್ರಿಯಾಶೀಲ ಪ್ರಾಧ್ಯಾಪಕ ವೃಂದದಿಂದ ಮಾತ್ರ. ಅದು ವಿಶ್ವವಿದ್ಯಾಲಯದ ಭಾಗ್ಯ.

ಈ CEERಅಂದ್ರೆ ಅಭಿಯಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆ ಕೇಂದ್ರದ ಪರಿಕಲ್ಪನೆ ಭಾರತದಲ್ಲಿ ಅಂತೂ ಎಲ್ಲೂ ಇಲ್ಲ. ಈಗಾಗಲೇ ಇದು ದೇಶ ವಿದೇಶಗಳ ಶಿಕ್ಷಣ ತಜ್ಞರ ಗಮನ ಸೆಳೆದು ಸತತವಾಗಿ ಪ್ರಶಸ್ತಿ ಪಡೆದು ಕುತೂಹಲ ಆಕರ್ಷಣೆಯ ಕೇಂದ್ರವಾಗಿದೆ. ಜ್ಞಾನದ ದಿಗಂತಗಳ ವಿಸ್ತರಿಸುತ್ತ, ಹೊಸ ಜ್ಞಾನದ ನೆಲಗಳನ್ನು ಕಂಡು ಹಿಡಿಯುವ ಸಂಶೋಧನೆ ಆರಂಭವಾದುದ್ದೇ “ಯಾಕೆ ಹೀಗೆ” ಅನ್ನುವ ಪ್ರಶ್ನೆ ಹಾಕುತ್ತ ಎಂಥಹ ಯಕ್ಷ ಪ್ರಶ್ನೆಗಳಿಗೂ ಉತ್ತರ ನೀಡುವ ಧರ್ಮರಾಜನನ್ನು ತಯಾರು ಮಾಡಲು.

Courtesy : Samyukta Karnataka

Leave a Reply