ಹಿಂಗ್ಯಾಕೆ ನಾವೆಲ್ಲ….! ಭಾಗ -1

ಹಿಂಗ್ಯಾಕೆ ನಾವೆಲ್ಲ….!
ರಘೋತ್ತಮ ಕೊಪ್ಪರ್

ಇಂದಿನ ದಿನಗಳಲ್ಲಿ ನಾವೆಲ್ಲ ಎಷ್ಟೇ ಸುಶಿಕ್ಷಿತರಾಗಿದ್ದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ಗೊತ್ತಿದ್ದೂ ಗೊತ್ತಿಲ್ಲದಂತೆ, ತಿಳಿದರೂ ತಿಳಿಯದವರಂತೆ ಯಾಕೆ ಮಾಡುತ್ತಿದ್ದೇವೆ ಅಥವಾ ಮಾತನಾಡುತ್ತಿದ್ದೇವೆ ಎಂಬುದು ಒಂದು ವಿಪರ್ಯಾಸವೇ ಸರಿ. ಅವುಗಳಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. (ಇಲ್ಲಿ ನಾವು ಎಂದರೆ ಸಾಮಾನ್ಯ ಜನರು.) ಅವುಗಳನ್ನು ಭಾಗಗಳನ್ನಾಗಿ ವಿಂಗಡಿಸಿದ್ದೇನೆ.

ಹಿಂಗ್ಯಾಕೆ ನಾವೆಲ್ಲ….! ಭಾಗ – ೧

ಇದೆಂಥ ಸರ್ಕಾರ! ಎಷ್ಟೋ ಸಲ ನಾವು ನಮ್ಮ ಕೈಯಾರೆ ಮತ ಹಾಕಿದ ಸರ್ಕಾರವನ್ನು ಬಯ್ಯುತ್ತೇವೆ. ಮತದಾನದ ಸಮಯದಲ್ಲಿ ಇರಬೇಕಾದ ಸಮಯಪ್ರಜ್ಞೆ ಅಥವಾ ತಿಳುವಳಿಕೆ ನಮಗೆ ಇಲ್ಲವೆಂದೇನಿಲ್ಲ. ಆ ಸಮಯದಲ್ಲಿ ನಮ್ಮಲ್ಲಿ ಕೆಲವರು ಮೋಹಕ್ಕೊಳಗಾಗಿರುತ್ತಾರೆ. ಕೆಲವರು ನಾವು ನಮ್ಮ ಪಕ್ಷ, ನಮ್ಮ ನಾಯಕರು, ನಮ್ಮ ಜಾತಿ, ನಮ್ಮ ಧರ್ಮ ಎಂದಾದರೆ ಕೆಲವರು ನಮ್ಮ ಮನೆಯಲ್ಲಿ ಮೊದಲಿಂದಲೂ ಇದೇ ಪಾರ್ಟಿ ಇದಕ್ಕೆ ನಮ್ಮ ಮತ ಎಂದು ನಿರ್ಧರಿಸಿಬಿಟ್ಟಿರುತ್ತಾರೆ. ಇಲ್ಲಿ ನಮಗೆ ಪಾರ್ಟಿ, ಜಾತಿ, ಮತ, ಧರ್ಮ ಮುಖ್ಯವಲ್ಲ. ಸ್ಪರ್ಧಿಸಿರುವ ವ್ಯಕ್ತಿ ಮುಖ್ಯ. ಆ ವ್ಯಕ್ತಿ ನಿಜವಾಗಿ ಸಮಾಜ ಸೇವಕನೇ! ನಮ್ಮ ದಿನ ನಿತ್ಯದ ಸಮಸ್ಯೆಗಳ ಅರಿವು ಆತನಿಗಿದೆಯೇ! ಅದನ್ನು ಪರಿಹರಿಸುವ ಶಕ್ತಿ ಮತ್ತು ಇರಾದೆ ಆತನಿಗಿದೆಯೇ! ಇವೆಲ್ಲವನ್ನು ಮರೆತು ಕಳೆದ ಬಾರಿ ಎನೂ ಕೆಲಸವನ್ನು ಮಾಡದಿದ್ದರೂ ಅಂತವರನ್ನು ಮರು ಆಯ್ಕೆ ಮಾಡುವುದೇಕೆ!
ಸಮಾಜ ಇಷ್ಟು ಮುಂದು ವರೆದರೂ, ತಂತ್ರಜ್ಞಾನ ಇಷ್ಟು ಮುಂದುವರೆದರೂ ಮತದಾನ ಮಾತ್ರ 50-60% ಮಾತ್ರ. ಉಳಿದ 40-50% ಜನರ ಆಯ್ಕೆ ಹಾಗೆಯೇ ಉಳಿಯಿತು.
ಇದನ್ನು ನೋಡಿದಾಗ ಒಂದು ಜೋಕ್ ನೆನಪಾಯಿತು. ಗಂಡ ಹೆಂಡಿರ ಜಗಳದಲ್ಲಿ ಒಬ್ಬರೊನ್ನಬ್ಬರು ಯಾಕಾಗಿ ಮದುವೆ ಆಯಿತೋ ಅಂದು ಬೈದುಕೊಂಡರಂತೆ. ಇಬ್ಬರಿಗೂ ಗೊತ್ತಿಲ್ಲ ಅದು ಅವರ ಇಷ್ಟವೇ ಅನ್ನೋದು. ನಾವು ನಮ್ಮ ಹೆಂಡತಿ ಚೆನ್ನಾಗಿಲ್ಲ ಅಂದರೆ ಅದು ನಮ್ಮ ಚಾಯ್ಸ್ ತಪ್ಪು ಎಂದರ್ಥ ಅಲ್ಲವೇ?
ಒಂದು ದಿನ ಬೆಂಗಳೂರಿನ ಒಂದು ಸರ್ವೇಲನ್ಸ್ ತಂಡ ಬಂದು ಉತ್ತರ ಕರ್ನಾಟಕದ ರಸ್ತೆಯ ಬಗ್ಗೆ ಒಬ್ಬ ಸ್ಥಳೀಯ ಸೈಕಲ್ ಸವಾರನನ್ನು ಪ್ರಶ್ನಿಸಿದರು, “ಏನಪ್ಪಾ ನಿಮ್ಮ ಊರಲ್ಲಿ ರಸ್ತೆಯಲ್ಲಿ ಇಷ್ಟು ತಗ್ಗುಗಳಿಗೆ, ಡಾಂಬರೀಕರಣ ಹದಗೆಟ್ಟು ಹೋಗಿದೆ ನಿಮಗೆ ಏನೂ ಅನ್ನಿಸುವುದಿಲ್ಲವೇ, ಒಬ್ಬರಾದರೂ ಕಂಪ್ಲೇಂಟ್ ಕೊಟ್ಟಿದ್ದೀರಾ, ಯಾಕೆ ಯಾರೂ ಏನು ಪ್ರಶ್ನಿಸುತ್ತಿಲ್ಲ?

ಸ್ಥಳೀಯ ನಗುತ್ತ ಅದಕ್ಕೆ ಉತ್ತರ ನೀಡಿದ, “ಸ್ವಾಮಿ ನಾನು ಒಬ್ಬ ಕೂಲಿ ಕಾರ್ಮಿಕ, ದಿನಪೂರ್ತಿ ದುಡಿದರೆ ನಮ್ಮ ಕುಟುಂಬ ಊಟ ಮಾಡಬಹುದು, ಇದೆಲ್ಲ ನನಗೆ ಬೇಕಿಲ್ಲ. ಅಷ್ಟೇ ಅಲ್ಲ ಒಂದು ಮಾತು ಕೇಳ್ತಿನಿ, ನೀವೆಲ್ಲಾ ಒಳ್ಳೆ ರಸ್ತೆಯಲ್ಲಿ ಓಡಾಡ್ತಿರಾ ಆದರೂ ನಿಮಗೆ ಬಿಪಿ ಶುಗರ್ ಎಲ್ಲಾ ಇದೆ. ನಾವು ನೋಡಿ ಸೈಕಲ್ ಮೇಲೆ ಎರಡು ರೌಂಡ್ ಓಡಾಡಿದರೆ ದೇಹದ ಎಲ್ಲಾ ಭಾಗಗಳಿಗೂ ವ್ಯಾಯಾಮ ಸಿಕ್ಕಂತಾಗುತ್ತದೆ, ಹಾಗಾಗಿ ಈ ರಸ್ತೆಗಳು ಆರೋಗ್ಯಕ್ಕೆ ಬೆಸ್ಟ್ ಅಲ್ಲವೇ ಎಂದು ನಗೆ ಚಟಾಕಿ ಹಾರಿಸಿದ.

ಕೆಲವೊಮ್ಮೆ ನಮ್ಮ ಬೇಡಿಕೆ ಗಳನ್ನು ಈಡೇರಿಸಿಕೊಳ್ಳಲು ಮುಷ್ಕರವನ್ನು ಮಾಡುತ್ತೇವೆ. ನಮ್ಮ ನಾಯಕರನ್ನು ಒತ್ತಾಯಿಸುತ್ತೇವೆ. ನಾವೇ ಮತ ಹಾಕಿ ಆರಿಸಿದ ನಾಯಕರ ಮುಂದೆ ನಮ್ಮ ಹಕ್ಕು ಗಳ ಹೋರಾಟ. ಅದು ಫಲಿಸದಿದ್ದರೆ ನಾವೇ ಪ್ರಯಾಣಿಸುವ ಬಸ್ ಗಳನ್ನು ಸುಡುವುದು. ನಮ್ಮ ಅಣ್ಣ ತಮ್ಮಂದಿರು, ಸ್ನೇಹಿತರು, ಬಂಧುಗಳು ಹೋಗುತ್ತಿರುವ ವಾಹನಗಳನ್ನು ಹೈವೇ ನಲ್ಲಿ ಗಂಟೆ ಗಟ್ಟಲೇ ನಿಲ್ಲಿಸಿ ಅವರಿಗೆಲ್ಲ ತೊಂದರೆ ನೀಡಿ ನಮ್ಮ ಮುಷ್ಕರಗಳನ್ನು ಫೋಟೊ ಸಹಿತ ಪೇಪರ್ ಮತ್ತು ನ್ಯೂಸ್ ಚಾನಲ್ ಗಳಲ್ಲಿ ಬರುವಂತೆ ಮಾಡಿಕೊಳ್ಳುತ್ತೇವೆ. ಆ ಸರ್ಕಾರಿ ಬಸ್ ಗಳು ನಮ್ಮ ಆಸ್ತಿಗಳೇ ಎಂದು ಎಲ್ಲರಿಗೂ ಗೊತ್ತು ಆದರೂ ಅದನ್ನೇ ಮಾಡಿಕೊಂಡು ಬಂದಿದ್ದೇವೆ. ಇನ್ನೂ ಮುಂದೆಯೂ ಬಹುಷ:…… ಎಲ್ಲವೂ ಗೊತ್ತಿದ್ದವರೆ ಹಿಂಗೆ ಮಾಡಿದರೆ ಹೇಗೆ …….. ಹಿಂಗ್ಯಾಕೆ ನಾವೆಲ್ಲ….!

2 Comments

  1. ನಮ್ಮದು ಕೇವಲ ಮತ ಪ್ರಭುತ್ವ, ಅದನ್ನು ಬಂಡವಾಳವಾಗಿ ಪರಿವರ್ತಿಸಿಕೊಂಡು ಪ್ರಭುತ್ವದ ರುಚಿ ಹತ್ತಿದ ಒಂದುಕಾಲದ ಪ್ರಜೆಗಳು, ಪ್ರಭುಗಳಾಗುವುದೇ ಇದರ ಚೋದಗಯ. ಇದಕ್ಕೆ ಪ್ರಜಾಪ್ರಭುತ್ವ ಎಂಬ ಘನ ನಾಮಧೇಯ.

    ಇರಲಿ, ನೆಪೋಲಿಯನ್ ಬೊನಾಪಾರ್ಟೆ, ಹೇಳಿರುವ “ನಿನಗೆ ನಿಯಮಗಳು ಸರಿತೋರುತ್ತಿಲ್ಲ ಎಂದಾದಲ್ಲಿ, ನಾಯಕನಾಗಿ ನಿಯಮ ಬದಲಿಸು.” ಎನ್ನುವ ಮಾತನ್ನು ಅರ್ಥಮಾಡಿಕೊಂಡು ಕೆಲವರು ನಾಯಕರಾಗಿ, ಪ್ರಭುಗಳಾಗಿ ಬದಲಾಗುತ್ತಾರೆ. ಎಲ್ಲೋ ಕೆಲವರು ಸಮಾಜಕ್ಕಾಗಿ ಕೆಲಸಮಾಡುತ್ತಾರೆ. ನಿರಾಶರಾಗಬೇಕಾಗಿಲ್ಲ. ಕಾರ್ಯಪ್ರವೃತ್ತರಾಗಲು ಮನಸ್ಸು ಮಾಡಬೇಕಾಗಿದೆ. ಎಲ್ಲೀವರೆಗೂ ನನ್ನ ಹೊಟ್ಟೆಗೆ ಸರಾಗವಾಗಿ ಊಟ, ವಸ್ತ್ರ, ಅಗತ್ಯಗಳು ದೊರೆಯುವುದೋ ಅಲ್ಲಿಯವರೆಗೂ ನಾನು ಕ್ಷೇಮಕರ ಆಟವನ್ನೇ ಆಡಬಯಸುತ್ತೇನೆ. ಇದು ಬಹುತೇಕ ಜನಸಾಮಾನ್ಯರ ಮನಸ್ಥಿತಿ. ನಾ ಬದಲಾದರೇ ಎಲ್ಲಬದಲಾವಣೆಗಳೂ ನನಗೆ ಕಾಣಲಾರಂಭಿಸುತ್ತವೆ. ಮತ್ತಿನ್ನೆನು? ಬದಲಾಗುವುದೊಂದೇ ದಾರಿ.

  2. ನಮ್ಮದು ಕೇವಲ ಮತ ಪ್ರಭುತ್ವ, ಅದನ್ನು ಬಂಡವಾಳವಾಗಿ ಪರಿವರ್ತಿಸಿಕೊಂಡು ಪ್ರಭುತ್ವದ ರುಚಿ ಹತ್ತಿದ ಒಂದುಕಾಲದ ಪ್ರಜೆಗಳು, ಪ್ರಭುಗಳಾಗುವುದೇ ಇದರ ಚೋದ್ಯ. ಇದಕ್ಕೆ ಪ್ರಜಾಪ್ರಭುತ್ವ ಎಂಬ ಘನ ನಾಮಧೇಯ.

    ಇರಲಿ, ನೆಪೋಲಿಯನ್ ಬೊನಾಪಾರ್ಟೆ, ಹೇಳಿರುವ “ನಿನಗೆ ನಿಯಮಗಳು ಸರಿತೋರುತ್ತಿಲ್ಲ ಎಂದಾದಲ್ಲಿ, ನಾಯಕನಾಗಿ ನಿಯಮ ಬದಲಿಸು.” ಎನ್ನುವ ಮಾತನ್ನು ಅರ್ಥಮಾಡಿಕೊಂಡು ಕೆಲವರು ನಾಯಕರಾಗಿ, ಪ್ರಭುಗಳಾಗಿ ಬದಲಾಗುತ್ತಾರೆ. ಎಲ್ಲೋ ಕೆಲವರು ಸಮಾಜಕ್ಕಾಗಿ ಕೆಲಸಮಾಡುತ್ತಾರೆ. ನಿರಾಶರಾಗಬೇಕಾಗಿಲ್ಲ. ಕಾರ್ಯಪ್ರವೃತ್ತರಾಗಲು ಮನಸ್ಸು ಮಾಡಬೇಕಾಗಿದೆ. ಎಲ್ಲೀವರೆಗೂ ನನ್ನ ಹೊಟ್ಟೆಗೆ ಸರಾಗವಾಗಿ ಊಟ, ವಸ್ತ್ರ, ಅಗತ್ಯಗಳು ದೊರೆಯುವುದೋ ಅಲ್ಲಿಯವರೆಗೂ ನಾನು ಕ್ಷೇಮಕರ ಆಟವನ್ನೇ ಆಡಬಯಸುತ್ತೇನೆ. ಇದು ಬಹುತೇಕ ಜನಸಾಮಾನ್ಯರ ಮನಸ್ಥಿತಿ. ನಾ ಬದಲಾದರೇ ಎಲ್ಲಬದಲಾವಣೆಗಳೂ ನನಗೆ ಕಾಣಲಾರಂಭಿಸುತ್ತವೆ. ಮತ್ತಿನ್ನೆನು? ಬದಲಾಗುವುದೊಂದೇ ದಾರಿ.

Leave a Reply