ಸ್ಟೀರಿಂಗ್ ಬೈಸಿಕಲ್

ಸ್ಟೀರಿಂಗ್ ಬೈಸಿಕಲ್
ಪ್ರಯಾಣಕ್ಕೆ ಬಳಕೆಯಾಗುವ ಅತ್ಯಂತ ಸರಳ ಸಾಧನವೆಂದರೆ ಅದು ಬೈಸಿಕಲ್. ಇದನ್ನು ಒಂದು ಸಾಮೂಹಿಕ ಆವಿಷ್ಕಾರವೆಂದು ಪರಿಗಣಿಸಬಹುದು. ಕಾರಣ, ಅನೇಕ ಜನರು ಇದರ ಸೃಷ್ಟಿಗೆ ತಮ್ಮ ಕೈ ಜೋಡಿಸಿದ್ದಾರೆ. ಆರಂಭದಿಂದಲೂ ಬೈಸಿಕಲ್ ಅನೇಕ ಬದಲಾವಣೆಗಳಿಗೆ ಒಳಗಾಗಿದ್ದರೂ ನವನವೀನ ಮಾದರಿಯ ಗೇರ್ ಅಳವಡಿಸಿದ ಸೈಕಲ್ ಬಳಸುವವರು ಹೆಚ್ಚಿದ್ದಾರೆ. ಚಿತ್ರದಲ್ಲಿ ಕಾಣುವ ಬೈಸಿಕಲ್ ಪ್ರಯೋಗಶೀಲರೊಬ್ಬರು (ತಲವಾಟದ ಜಯಕೃಷ್ಣ ಗುಂಡೂಮನೆ) ಮಾಮೂಲಿ ಹ್ಯಾಂಡಲ್ ಬದಲು ಕಾರಿನ ಹ್ಯಾಂಡಲ್ ಅಳವಡಿಸಿ ಹೊಸ ಪ್ರಯೋಗ ಮಾಡಿದ್ದಾರೆ.ಮಕ್ಕಳೆಲ್ಲಾ ಬೈಸಿಕಲ್ ಓಡಿಸುತ್ತಲೇ ಕಾರಿನ ಸ್ಟೀರಿಂಗ್ ತಿರುಗಿಸಿದ ಮೋಜು ಅನುಭವಿಸುವುದು ಅಕ್ಷರಕ್ಕೆ ನಿಲುಕದ್ದು….!
ಹೊಸ್ಮನೆ ಮುತ್ತು

Leave a Reply