ತಿರುವು- ಮುರುವು

ತಿರುವು- ಮುರುವು
ವಸ್ತುಗಳ ‘ಪ್ರೀತಿಸಿ’, ವ್ಯಕ್ತಿಗಳ ‘ಬಳಸಿ’
ತಿರುಮುರುವು ಹಾದಿಯಲಿ ಬಹುದೂರ ಚಲಿಸಿ,
ಕಣ್ಣು ಮರೆಯಾಗುತ್ತಲಿದೆ ನೆಮ್ಮದಿಯ ಬದುಕು,
ಇನ್ನಾದರೂ ಒಂದು ಸಾರಿ ದಾರಿ ಹುಡುಕು…

ಕಾವ್ಯ ಕನ್ನಿಕೆ
ಕಾವ್ಯಕನ್ನಿಕೆಗಿಂದು ವಿಧವಿಧದ ರೂಪ,
ಪ್ರಾಸ- ಪ್ರಸ್ತಾರಗಳು ಭಾಳ ಅಪರೂಪ…
ಸತತ ಪರಿವರ್ತನೆ ಈ ಜಗದ ನಿಯಮ,
ಸಾಹಿತ್ಯ-ಕ್ಷೇತ್ರವೂ ಹೊರತಲ್ಲ ತಮ್ಮ.

ಮನವೆಂಬ ಮರ್ಕಟ
ಮಂಗಗಳು ಉಪವಾಸ ಮಾಡಿದ್ದೂ ಗೊತ್ತೇ?
ಮನಸ್ಸಿನ ಹತೋಟಿ ಸುಲಭವೇ ಮತ್ತೆ?!
ಎಂಥೆಂಥ ಮಹಿಮರನು ಗೊಂಬೆಯೊಲು ಕುಣಿಸಿ…
ಗಹಗಹಿಸಿ ನಗುವದು ಜಯಾದಿ ಸಂಭ್ರಮಿಸಿ !
(ಒಮ್ಮೆ ಮಂಗಗಳು ಏಕಾದಶಿ ಉಪವಾಸ ಮಾಡಲು ನಿರ್ಧರಿಸಿ ಕ್ರಮೇಣ ಹಣ್ಣುಗಳನ್ನು ತಂದಿಟ್ಟುಕೊಳ್ಳುವ, ಸುಲಿದಿಟ್ಟುಕೊಳ್ಳುವ, ಬಾಯಲ್ಲಿ ಇಟ್ಟುಕೊಂಡು ಮರುದಿನ ಜಗಿಯುವ ನಿರ್ಧಾರ ಮಾಡಿ ಮನಸ್ಸು ತಡೆಯಲಾರದೆ ಅಂದೇ ಉಪವಾಸ ಮುರಿಯುತ್ತವೆ. ಮನಸ್ಸಷ್ಟು ಚಂಚಲ ಎಂಬುದು ವಿಷಯ.)

Leave a Reply