ವಿಶಿಷ್ಟ ವಿನ್ಯಾಸದ ಹೂಜಿ

ವಿಶಿಷ್ಟ ವಿನ್ಯಾಸದ ಹೂಜಿ
ಇದೊಂದು ವಿಶಿಷ್ಟ ವಿನ್ಯಾಸದ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಧನ. ವಿಶ್ರಾಂತ ಸ್ಥಿತಿಯಲ್ಲಿರುವ ನಂದಿಯ (ಬಸವನ) ಆಕಾರದಲ್ಲಿ ಈ ಹೂಜಿಯನ್ನು ನಿರ್ಮಿಸಲಾಗಿದೆ. ನಂದಿಯ ಮುಖದಿಂದ ನೀರು ಹೊರಬರುವ ವ್ಯವಸ್ಥೆ ಈ ಹೂಜಿಯಲ್ಲಿರುವುದರಿಂದ ಆಸ್ತಿಕರಿಗೆ ಈ ನೀರು ಪವಿತ್ರ ತೀರ್ಥದಂತೆ ಭಾಸವಾಗುತ್ತದೆ. ಲೋಹದಿಂದ ತಯಾರಿಸಲಾದ ಈ ಹೂಜಿಯಲ್ಲಿನ ನೀರು ಜಪ-ತಪ, ಪೂಜೆ- ಪುನಸ್ಕಾರಗಳಿಲ್ಲದೇ, ದೇವರ ಅಭಿಷೇಕಕ್ಕೂ ಕೆಲವೊಮ್ಮೆ ಕುಡಿಯಲಿಕ್ಕೂ ಬಳಕೆಯಾಗುತ್ತದೆ. ಯತಿಗಳ ಬಳಿಯಲ್ಲಿರುವ ಕಮಂಡಲದ ವಿನ್ಯಾಸವನ್ನು ಹೋಲುವ ಈ ವಿಶಿಷ್ಟ ಹೂಜಿಯನ್ನು ನಿರ್ಮಿಸಿದ ಶಿಲ್ಪಿಯ ಕೈ ಚಳಕಕ್ಕೊಂದು ಸಲಾಂ ಹೇಳಲೇಬೇಕು.
ಹೊಸ್ಮನೆ ಮುತ್ತು

Leave a Reply