ಕೇಳು ನಾಟಕಪ್ರಿಯ

ಕೇಳು ನಾಟಕಪ್ರಿಯ
ನಾಟಕ ವಾಚನ ಸಪ್ತಾಹ
ಅಭಿನಯದಲ್ಲಿ ಆಂಗಿಕಾಭಿನಯದ ನಂತರ ಬರುವ ಸಶಕ್ತವಾದ ಅಭಿನಯವೇ ವಾಚಿಕ. ಅದಕ್ಕಾಗಿಯೇ ವಾಚಿಕರ ‘ಸರ್ವವಾಂಙ್ಮಯಂ’ ಎಂದಿದ್ದಾರೆ. ಆಡುಮಾತಿನಿಂದ ಬರವಣಿಗೆ; ಬರವಣಿಗೆಯಿಂದ ಆಡುಮಾತಿಗೆ ನಾಟಕವು ಉತ್ತಮ ಉದಾಹರಣೆ- ‘ಕಲಾತ್ಮಕವಾದ ಮಾತೇ ನಾಟಕ’ ವಾಚಿಕಾಭಿನಯವೆಂದರೆ ಲಿಖಿತ – ಅಲಿಖಿತ ಮತ್ತು ಮಾತಿನ ಮೂಲಕ ಅರ್ಥೈಸುವುದಾಗಿದೆ. ವಾಚಿಕ ಕಲೆ ಪಾಶ್ಚ್ಯಾತ್ಯದ ಗೆ ಸಂವಾದಿಯಾದುದು. ವಾಚಿಕ ಕಲೆಗಳನ್ನು ‘ಶಾಬ್ದಿಕ ಕಲೆ’ ಎಂದೂ ಹೇಳಲಾಗುತ್ತದೆ. ನಾವು ಕೆಲವು ನಾಟಕಪ್ರಿಯರು ಆಗಾಗ್ಗೆ ಅಲ್ಲಲ್ಲಿ ಕುಳಿತು ನಾಟಕವೊಂದನ್ನು ಓದುತ್ತೇವೆ. ಆವಾಗ ಇಂತಹ ನಾಟಕ ಓದಿನ ಸಪ್ತಾಹದ ಪ್ರಸ್ತಾಪ ಬಂದುದರಿಂದ ಏಳು ನಾಟಕಗಳು ಓದುವಿಕೆಯ ಈ ‘ಕೇಳು ನಾಟಕಪ್ರಿಯ’ ರೂಪಗೊಂಡಿತು. ಡಾ. ವಾಮನ ಬೇಂದ್ರೆ, ಜಿ.ಬಿ.ಜೋಶಿ, ಪ್ರೊ. ಕೀರ್ತಿನಾಥ ಕುರ್ತಕೋಟಿಯವರ ಜನ್ಮ ದಿನಾಂಕಗಳ ಔಚಿತ್ಯವನ್ನು ಬಳಸಿಕೊಂಡು ಏಳು ದಿನಗಳ ವಾಚನ ಈ ತಿಂಗಳು ೨೮ರಿಂದ ಆರಂಭ. ಮೊದಲನೆಯ ದಿನವಾದ ೨೮-೦೭-೨೦೧೯ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ೨೯-೦೭-೨೦೧೯ ರಿಂದ ೦೩-೦೮-೨೦೧೯ ರ ವರೆಗೆ ಪ್ರತಿದಿನ ಸಂಜೆ ೫.೩೦ಕ್ಕೆ ಆರಂಭಗೊಳ್ಳಲಿದೆ. ಈ ನಾಟಕ ವಾಚನ ಕಾರ್ಯಕ್ರಮವು ಸುಭಾಸ ರಸ್ತೆಯ ಮನೋಹರ ಗ್ರಂಥ ಮಾಲಾ ಅಟ್ಟದಲ್ಲಿ ನೆರವೇರಲಿದೆ. ಈ ವಿಶಿಷ್ಟ ಪ್ರಯೋಗವನ್ನು ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ , ಅಭಿನಯ ಭಾರತಿ ಮತ್ತು ಸ್ನೇಹ ಸಿಂಚನ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿವೆ.
ದಿ. ೨೮-೦೭-೨೦೧೯ – ನಟಸಾಮ್ರಾಟ
ದಿ. ೨೯-೦೭-೨೦೧೯ – ಪರಿಮಳದವರು
ದಿ. ೩೦-೦೭-೨೦೧೯ – ಮಹಾಮಾತ್ಯ ಚಾಣಕ್ಯ
ದಿ. ೩೧-೦೭-೨೦೧೯ – ಚಂದ್ರಗುಪ್ತ
ದಿ. ೦೧-೦೮-೨೦೧೯ – ಮರೀಚಿಕೆ
ದಿ. ೦೨-೦೮-೨೦೧೯ – ಯಯಾತಿ
ದಿ. ೦೩-೦೮-೨೦೧೯ – ಕೋರ್ಟ್ ಮಾರ್ಷಲ್

Leave a Reply