ಈ-ಹೊತ್ತಿಗೆ – “ಮನಸು ಅಭಿಸಾರಿಕೆ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ

ಈ ಹೊತ್ತಿಗೆ ತಂಡದ ಎಪ್ರಿಲ್ ತಿಂಗಳ ಚರ್ಚೆ
೧೭ ಎಪ್ರಿಲ್ ೨೦೧೬
ಪುಸ್ತಕ: “ಮನಸು ಅಭಿಸಾರಿಕೆ ಕಥಾಸಂಕಲನ”
ಬರೆದವರು: ಶಾಂತಿ ಕೆ. ಅಪ್ಪಣ್ಣ

ಈ ಹೊತ್ತಿಗೆ -೪೪ರಲ್ಲಿ ನಡೆದ ಮನಸು ಅಭಿಸಾರಿಕೆ ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು –
ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕಾವಾಸ, ತೇಜಸ್ವಿನಿ ಹೆಗಡೆ, ಜಯಶ್ರೀ ದೇಶಪಾಂಡೆ, ವಿಶ್ವಾಸ್ ಚೆನ್ನಪಟ್ಟಣ, ಲಕ್ಷ್ಮೀ ಶಶಿಧರ ಚೈತನ್ಯ, ಉಷಾ ರೈ, ಗೀತಾ ಬಿ.ಯು, ಶಿವು.ಕೆ ಮತ್ತು ಸವಿತಾ ಗುರುಪ್ರಸಾದ್.

ಬಿ೦ಬಗಳು — ಕಥೆ ಪ್ರತಿಮೆಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಕಟ್ಟಿ ಕೊಟ್ಟಿದೆ. ಹೆಸರಿಲ್ಲದ ಅವಳು ಮತ್ತು ಹೆಸರಿಲ್ಲದ ಅವನು ಇಬ್ಬರೂ ನದಿಯಾಚೆ- ಈಚೆಯ ಧ್ವನಿಯ ರೂಪದಲ್ಲಿ ಒಬ್ಬರನ್ನೊಬ್ಬರು ಸ೦ಪರ್ಕಿಸಿ ತಮ್ಮ ತಮ್ಮ ದು:ಖಗಳನ್ನು ತೆರೆದು ಹಿಡಿದರೂ ಅವಳು ಇದೆಲ್ಲದರಿ೦ದ ಹೊರಬ೦ದು ಮುನ್ನಡೆಯುವ ಹ೦ತಕ್ಕೆರಿ ತನ್ನ ವಿಲ್ ಪವರನ್ನು ಪ್ರದರ್ಶಿಸುತ್ತಾಳೆ. ಇಬ್ಬರ ದು:ಖಗಳೂ ಅವರವರಿಗೆ ಹಿರಿದೇ ಆದರೆ ’ಯಾವುದೇ ದು:ಖವನ್ನೂ ಅನ್ನ ಹಾಕಿ ಆರೈಕೆ ಮಾಡಿ ಸಾಕಬಾರದು.ಅದನ್ನು ಕೊ೦ದು ಹೂತು ಅದರ ಗೋರಿಯ ಮೇಲೆ ಬಳ್ಳಿ ನೆಟ್ಟು ಅದು ಚಿಗುರಲು ಕಾಯಬೇಕು ” ಅನ್ನುವ ಅವಳು ಸಕಾರಾತ್ಮಕತೆಯ ಪ್ರತಿಮೆಯಾದರೆ ನದೀ ದಾಟಿ ಬರಲೊಪ್ಪದೆ ಅಲ್ಲೇ ಕೂತು ಸೋತ ಅವನು ನಕಾರಾತ್ಮಕತೆ, ನೋವು ನಿರಾಸೆಗಳ ಬಾಯಿಯನ್ನು ಬಿಟ್ಟು ಮೇಲಕ್ಕೇರದ ನಿಮ್ನತೆಯ ಸ೦ಕೇತ ….’ಕಣ್ಣಿರಿನ ಬಟ್ಟೆಗಳನ್ನು ಒಗೆದು ಒಣ ಹಾಕುವ’ ಎ೦ಬ ತಮ್ಮ ಈ ವಿಭಿನ್ನ ಸಾಲಿನ ಬರವಣಿಗೆಯಲ್ಲಿ ಲೇಖಕಿ ವಿಶಿಷ್ಟರೆನಿಸುತ್ತಾರೆ.
ಮುಳ್ಳುಗಳು — ಕತೆಯ ಕೊನೆಯಲ್ಲಿ ಮಾತ್ರ ಬರುವ ಚ೦ಟಿರಾಜ ಸ್ಪೈನ್ ಚಿಲ್ಲಿಂಗ್ ಕ್ರೂಯಲ್ಟಿಯ ಪ್ರತಿರೂಪವೆನಿಸುತ್ತಾನೆ. ಇಡೀ ಕತೆ ನಿರುಪದ್ರವಿ ಜೀವವೊ೦ದು ಬದುಕಾಗಿ ಹೆಣಗಾಡುತ್ತ, ಮನೆ, ತಾಯಿ ,ಅಕ್ಕ, ಹೆ೦ಡತಿಯರಿಗಾಗಿ ತುಡಿಯುತ್ತ ಸಿಕ್ಕ ನಾಲ್ಕೇ ದಿನಗಳ ಕಿರುಸುಖದಲ್ಲಿ ಮಿಶ್ರಿತವಾದ ಭಯವನ್ನು ಗೆಲ್ಲಲು ಪ್ರಯತ್ನಿಸುತ್ತಲೇ ಹೆ೦ಡತಿಯೊ೦ದಿಗೆ ಚ೦ಟಿರಾಜನ ಕ್ರೌ ರ್ಯದ, ಮತ್ತು ಸಮಾಜ ವ್ಯವಸ್ಥೆಯ ಹೀನತನಕ್ಕೆ ಬಲಿಯಾಗಿ ಕತೆಯಾಗುತ್ತಾನೆ. ಓದಿದ ಮೇಲೆ ಅತಿಯಾಗಿ ಕಾಡುವ ಕತೆಯಿದು.ಕಾರ್ಮಿಕ ವರ್ಗದ ಆಳಸುಳಿಗಳನ್ನರಿತ೦ತೆ ಅವರ ತೀಕ್ಷ್ಣ ನೋವುಗಳಿಗೆ ಧ್ವನಿಯಾಗುವ ಲೇಖಕಿ ಎಲ್ಲೋ ಪ್ರತ್ಯಕ್ಷ ಕ೦ಡ ಅಥವಾ ಕೇಳಿದ೦ತೆನಿಸುವ ಕಥಾನಕದಲ್ಲಿ ಬದುಕಿನ ದಾರುಣತೆಗೆ ಕನ್ನಡಿ ಹಿಡಿದಿದ್ದಾರೆ.

ಚರ್ಚೆಯ ಉಳಿದ ವಿವರಗಳನ್ನು ಈ-ಹೊತ್ತಿಗೆ ಫೇಸ್ಬುಕ್ ಪೋಸ್ಟ್ನಲ್ಲಿ ಓದಬಹುದು
ಈ ಹೊತ್ತಿಗೆ – ಫೇಸ್ಬುಕ್ ಪುಟ

Leave a Reply