ಚುನಾವಣೆ ಬಂತು

ಬಂತಪ್ಪಾ ಬಂತು ಚುನಾವಣೆ ಬಂತು

ರಸ್ತೆ ತುಂಬ ಲೌಡ ಸ್ಪೀಕರ ಬಂತು

ಹಗಲು ರಾತ್ರಿ ಮತ ಮತ ಅಂತು

ದೊಡ್ಡ ಪಕ್ಷ ಎಲ್ಲಾರಿಗೂ ಅಂತು

ನಾನೇ ದೊಡ್ಡವ ದುಡ್ಡು ಕೊಡುವವ

ನನಗೇ ಇರಲಿ ನಿಮ್ಮ ಮತ ಅಂತು

ಸಾಕು ನನಗೆ ವಿರೋಧ ಪಕ್ಷದ ಕಂತು

ನನಗೊಮ್ಮೆ ಕೊಡಿ ನಿಮ್ಮ ಮತ(ದುಡ್ಡು ಮಾಡಲು)ಅಂತು
election

ಓಹೋ ಪ್ರಾದೇಶಿಕ ಪಕ್ಷ ಬೇರೆ ಬಂತು

ನಾನೇ ಬೇರೆ ತರಹ ಅಂತು

ಅಂತು ಇನ್ನೊಂದು ಪಕ್ಷ ಮತ ಕೇಳಲಿಕ್ಕೆ ಬಂತು

ನಾ ಯಾರಿಗೆ ಕೊಡಲಿ ಮತ ನಂಗ ತಿಲಿವಲ್ತು

ಯಾಕಪ್ಪಾ ಮತ್ತೆ ಈ ಚುನಾವಣೆ ಬಂತು

ಅಂತು ನನ್ನ ಪದ್ಯ ಪೇಪರನಲ್ಲೂ ಬಂತು

ಇವತ್ತ ವಿವಿಡ್ಲಿಪಿ ನಲ್ಲೂ ಬಂತು

ವಿಜಯ.ಇನಾಮದಾರ
ಧಾರವಾಡ

Leave a Reply