ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ

ಮಂಗಳೂರು: ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಈ ಸಾಲಿನ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಸಾಹಿತಿ ನಾ.ಡಿಸೋಜ ಹೇಳಿದ್ದಾರೆ. ಬರುವ ಫೆಬ್ರುವರಿ 9ರಂದು ನಗರದ ನಂತೂರಿನಲ್ಲಿರುವ ಪ್ರತಿಷ್ಠಾನದ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಕನ್ನಡದ ಸೃಜನಶೀಲ ಬರಹಗಾರ ಎಂದೇ ಬೊಳುವಾರು ಮಹಮದ್ ಕುಂಞ ಅವರು ಖ್ಯಾತರಾಗಿದ್ದಾರೆ. ಅವರು ಬರೆದ ಮೂರನೇ ಕಾದಂಬರಿ ಓದಿರಿ ಕನ್ನಡ ಸಾಹಿತ್ಯ ವಲಯದಲ್ಲಿ ಜನಪ್ರಿಯತೆ ಪಡೆದಿದೆ. ಇದರಲ್ಲಿ ಪ್ರವಾದಿ ಮಹಮದರ ಜೀವನವನ್ನು ಜನಪದ ನಾಯಕನ ಬದುಕಿನ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ಈ ಪುರಸ್ಕಾರ ಬಂದಿದೆ.

courtsey:prajavani.net

https://www.prajavani.net/stories/stateregional/sandesha-kannada-literary-awardboluwaru-mohammed-kunhi-695014.html

Leave a Reply