ಪುಸ್ತಕ ವಿಮರ್ಶೆ- ನುಡಿ ಬೆಡಗು, ಕಿ.ರಂ.ನಾಗರಾಜ ಅವರ ವಿಮರ್ಶೆಗಳ ಗುಚ್ಛ

ವಿಮರ್ಶಕ ಕಿ.ರಂ. ನಾಗರಾಜ ಅವರು ಗತಿಸಿ 10 ವರ್ಷ ಕಳೆದರೂ ಅವರ ನೆನಪುಗಳು ಸಾಂಸ್ಕೃತಿಕ ಮನಸ್ಸುಗಳಿಂದ ಗತಿಸಿ ಹೋಗಿಲ್ಲ. ತನ್ನ ಬದುಕಿನ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದ ಘನ ಪರಂಪರೆಯನ್ನು ಸಂಪೂರ್ಣ ಆವರಿಸಿಕೊಂಡವರು ಕಿ.ರಂ. ಅವರ ಒಡನಾಟಕ್ಕೆ ದಕ್ಕಿದ ಯಾವ ಮನುಷ್ಯನನ್ನೂ ಅವರು ಪ್ರಭಾವಿಸದೆ ಬಿಟ್ಟಿಲ್ಲ ಎಂಬುದಕ್ಕೆ ಈ ಪುಸ್ತಕವೇ ಸಾಕ್ಷಿ. ಕಿ.ರಂ. ಎಂಬ ವಿಮರ್ಶಾ ಪ್ರತಿಭೆ ಸೃಷ್ಟಿಸಿದ ಸಾಂಸ್ಕೃತಿಕ ಸಂಚಲನದ ಅಗಾಧತೆಯನ್ನು ಅರಿಯಲು ಡಾ. ಶಿವರಾಜ ಬ್ಯಾಡರಹಳ್ಳಿ ಅವರ ‘ನುಡಿಬೆಡಗು’ ಕೃತಿ ಸಹಾಯ ಮಾಡುತ್ತದೆ. ಕಿ.ರಂ ಅವರು ನೀಲು ಕವಿತೆಗಳು, ಅಡಿಗರ ಕವಿತೆಗಳು, ಚಂದ್ರಶೇಖರ ಕಂಬಾರ ಅವರ ‘ಸಿರಿ ಸಂಪಿಗೆ’, ಅಂಕುರ್‌ ಬೆಟಗೇರಿ ಅವರ ‘ಹಳದಿ ಪುಸ್ತಕ’ ಸೇರಿ ಹಲವು ಕೃತಿಗಳಿಗೆ ಸಂಬಂಧಿಸಿದಂತೆ ಮಾಡಿದ ವಿಮರ್ಶಾ ಗುಚ್ಛ ಇಲ್ಲಿದೆ. ಜತೆಗೆ ಅವರ ಆಯ್ದ ಭಾಷಣಗಳನ್ನು ಸಂಪಾದಿಸಲಾಗಿದೆ. ಕಿ.ರಂ.ನಾಗರಾಜ ಅವರ ಸಾಹಿತ್ಯಕ ದೃಷ್ಟಿಕೋನವನ್ನು ಅರಿಯಲು ಈ ಕೃತಿ ಪ್ರಯೋಜನಕಾರಿ.

courtsey:prajavani.net

https://www.prajavani.net/artculture/book-review/nudi-bedagu-book-review-699045.html

Leave a Reply