ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೧: ಲೇಖಕರೊಂದಿಗೆ ಸಂವಾದ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೧: ಲೇಖಕರೊಂದಿಗೆ ಸಂವಾದ

ಎರಡನೆಯ ದಿನದ ಈ ಕೊನೆಯ ಗೋಷ್ಠಿಯಲ್ಲಿ ಪ್ರಸಿದ್ಧ ಲೇಖಕ ಸಿ.ಪಿ.ಕೃಷ್ಣಕುಮಾರ(ಸಿ.ಪಿ.ಕೆ) ಅವರೊಂದಿಗೆ ಸಂವಾದ ನಡೆಯುತ್ತದೆ. ಈ ಗೋಷ್ಠಿಯಲ್ಲಿ ಲೇಖಕರ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯವಲ್ಲ. ಅವರ ಸಾಹಿತ್ಯಿಕ ಸಾಧನೆಗಳನ್ನು ಕುರಿತು ಚರ್ಚಿಸುವುದು ಮುಖ್ಯ. ಮೊದಲಿಗೆ, ಸಂವಾದಕರಾದ ಡಿ.ಕೆ.ರಾಜೇಂದ್ರ ಅವರು ಸಂವಾದಕ್ಕೆ ಚಿಕ್ಕ ಪ್ರಸ್ತಾವನೆ ಹಾಕಿ, ಪ್ರಶ್ನೆಗಳನ್ನು ಕೇಳುತ್ತಾರೆ. ಸಂವಾದವು ಕೇವಲ ಪ್ರಶ್ನೋತ್ತರಕ್ಕೆ ಸೀಮಿತವಾಗದೆ ಸಂವಾದಕ – ಸಂವಾದಿತರ ನಡುವಿನ ಚರ್ಚೆಯೂ ಆಗಬಹುದು. ಭಿನ್ನಾಭಿಪ್ರಾಯಗಳ ಚಕಮಕಿಯೂ ನಡೆಯಬಹುದು. ಮುಖ್ಯವಾಗಿ ಸಂವಾದಿತರ ಸಾಹಿತ್ಯ ಸಾಧನೆ, ಅದರ ಹಿಂದಿನ ಪ್ರೇರಣೆ, ಮುಂದಿನ ಪರಿಣಾಮಗಳ ಮೇಲೆ ಬೆಳಕು ಬೀಳಬೇಕು. ಸಂವಾದದ ಕೊನೆಯ ಹತ್ತು – ಹದಿನೈದು ನಿಮಿಷ ಸಭಿಕರಿಂದ ಬಂದ ಪ್ರಶ್ನೆಗಳಿಗೆ ಸಂವಾದಕರು ಉತ್ತರ ಕೊಡುತ್ತಾರೆ.

Leave a Reply