ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೫: ನಮ್ಮ ಕೃಷಿ ಸಂಸ್ಕೃತಿಯ ಸವಾಲುಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೫: ನಮ್ಮ ಕೃಷಿ ಸಂಸ್ಕೃತಿಯ ಸವಾಲುಗಳು

ನಮ್ಮ ಕೃಷಿ ಅರೋಗ್ಯಕರವಾಗಿದ್ದರೆ ಸಾಹಿತ್ಯ ಸಂಸ್ಕೃತಿ ಶಿಕ್ಷಣ ಆರೋಗ್ಯಗಳು ಸುಖಕರವಾಗಿರುತ್ತವೆ. ಈಗ ಕೃಷಿಗೆ ಅಭಿವೃದ್ಧಿ, ಹವಾಮಾನ ವೈಪರೀತ್ಯ, ವೀಪರಿತ ಆಶೆಗಳಿಂದ ದೊಡ್ಡ ಹೊಡೆತ ಬಿದ್ದಿದೆ. ಸರಿಯಾಗಿ ಮಳೆಯಾಗುತ್ತಿಲ್ಲ. ಕೃಷಿ ಆಶೆಗಳಿಂದ ದೊಡ್ಡ ಹೊಡೆತ ಬಿದ್ದಿದೆ. ಸರಿಯಾಗಿ ಮಳೆಯಾಗುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಕೃಷಿಯ ಖರ್ಚು ಹೆಚ್ಚಾಗುತ್ತಿದೆ, ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲ. ರೈತರ ಸಾಲ ಬೆಳೆಯುತ್ತಲೇ ಇದೆ. ಇವೆಲ್ಲವುಗಳ ಪರಿಣಾಮವಾಗಿ ದಿನದಿಂದ ದಿನಕ್ಕೆ ರೈತರ ಆತ್ಮಹತ್ಯೆಗಳು ಆಘಾತಕಾರಿಯಾಗಿ ಹೆಚ್ಚಾಗುತ್ತಿವೆ. ಈ ವಿಷಮ ಪರಿಸ್ಥಿತಿಗೆ ವ್ಯಕ್ತ ಮತ್ತು ಅವ್ಯಕ್ತ ಕಾರಣಗಳೇನು? ಇವುಗಳಿಗೆಲ್ಲ ಏನು ಪರಿಹಾರ? ಅಪಾರ ಸಂಖ್ಯೆಯ ಜನರಿಗೆ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ಉದ್ಯೋಗ ಒದಗಿಸುತ್ತಿರುವ ಕೃಷಿಯೇ ಆತಂಕಕ್ಕೊಳಗಾದರೆ ದೇಶದ ಸ್ಥಿತಿ ಏನು ? ನೀರಾವರಿ ಸೌಲಭ್ಯ ಸಿಕ್ಕ ಕೂಡಲೇ ಎಲ್ಲರೂ ವಾಣಿಜ್ಯ ಬೆಳೆಗಳಿಗೆ ಹೋದರೆ ನೂರಾ ಇಪ್ಪತ್ತು ಕೋಟಿ ಜನಸಂಖ್ಯೆಗೆ ಆಹಾರ ಎಲ್ಲಿಂದ ಬರುತ್ತದೆ? ನಮ್ಮ ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕಾದರೆ ಕೈಗೊಳ್ಳಬೇಕಾದ ಕ್ರಮಗಳೇನು?
ಈ ಪ್ರಶ್ನೆಗಳನ್ನು ಕೃಷಿ ಅಧ್ಯಯನದಲ್ಲಿ ಅನುಭವ, ವಿದ್ವತ್ತು ಪಡೆದಿರುವ ಎ.ಪಿ. ಚಂದ್ರಶೇಖರ, ಶಿವಾನಂದ ಕಳವೆಯರೊಂದಿಗೆ ಪ್ರಕಾಶ ಭಟ್ ಚರ್ಚೆ ನಡೆಸುತ್ತಾರೆ.
ಎ.ಪಿ.ಚಂದ್ರಶೇಖರ
ಶಿವಾನಂದ ಕಳವೆ
ಪ್ರಕಾಶ ಭಟ್

Leave a Reply