ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು

ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು:

ನವೋದಯ ಕಾಲದಲ್ಲಿ ಕನ್ನಡದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಐತಿಹಾಸಿಕ ಕಾದಂಬರಿಗಳು ಬರುತ್ತಿದ್ದವು. ಗಳಗನಾಥರಿಂದ ಮೊದಲುಗೊಂಡು ತ.ರಾ.ಸು ಅವರವರೆಗೆ ಕನ್ನಡ ಐತಿಹಾಸಿಕ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರಲ್ಲಿ ಓದಿನ ರುಚಿ ಹಚ್ಚಲು ಸಹಾಯ ಮಾಡಿದವು. ಭಾರತ ಮತ್ತು ಕರ್ನಾಟಕದ ಐತಿಹಾಸಿಕ ಪರಂಪರೆಗಳನ್ನು ನಮ್ಮ ಅರಿವಿಗೆ ತರಲು ಯತ್ನಿಸಿದವು. ಈಗ ಐತಿಹಾಸಿಕ ಕಾದಂಬರಿಗಳ ಪರಂಪರೆ ಹೆಚ್ಚು-ಕಡಿಮೆ ನಿಂತೇ ಹೋದಂತಾಗಿದೆ. ಈ ಸಾಹಿತ್ಯ ಪ್ರಕಾರಗಳಲ್ಲಿ ಮತ್ತೆ ಆಸಕ್ತಿ ಹುಟ್ಟುವಂತೆ ಮಾಡುವ ಒಂದು ಪ್ರಯತ್ನ ಈ ಗೋಷ್ಠಿ.

ಈ ಗೋಷ್ಠಿಯಲ್ಲಿ ಬೆಟಗೇರಿ ಕೃಷ್ಣಶರ್ಮ, ತ.ರಾ.ಸು, ಮಾಸ್ತಿ, ಬೊಳುವಾರು ಮಹಮದ ಅವರ ಕಾದಂಬರಿಗಳಿಂದ ಆಯ್ದ ಭಾಗಗಳನ್ನು ವಿದ್ಯಾ ಶರ್ಮ, ಪ್ರಜ್ಞಾ ಮತ್ತಿಹಳ್ಳಿ, ಎನ್. ಮಂಗಳಾ, ಎಂ. ಗಣೇಶ್ ಅವರು ಪರಿಣಾಮಕಾರಿಯಾಗಿ ಓದುವದೂ ಒಂದು ಕಲೆ ಎಂದು ತೋರಿಸಿಕೊಡುತ್ತಾರೆ.

ಹೈದರಾಬಾದಿನ ಶಿವರಾಮ ಪಡಿಕ್ಕಲ್ ಅವರು ಗೋಷ್ಠಿಯನ್ನು ನಿರ್ದೇಶಿಸುತ್ತಾರೆ

Leave a Reply