ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ

ಇತ್ತೀಚಿಗೆ, Investigating Journalism ಬೆಳೆಯತೊಡಗಿದ ಮೇಲೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮ ನಮ್ಮ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಅನೇಕ ಅನಿಷ್ಟಗಳನ್ನು ಬೆಳಕಿಗೆ ತಂದು ಒಳ್ಳೆಯ ಕೆಲಸ ಮಾಡಿತೊಡಗಿವೆ. ಮಾಹಿತಿ ಹಕ್ಕು ಕಾಯಿದೆಯ ಲಾಭ ಪಡೆದುಕೊಂಡು ಅನೇಕ ಭ್ರಷ್ಟಾಚಾರ ಪ್ರಕರಣಗಳನ್ನು ಹೊರಗೆ ತಂದಿವೆ. ಆದರೆ ಹಾಗೆ ಮಾಡುವಾಗ ಸುದ್ದಿಗಳಿಗೆ ರೋಚಕತೆ ನೀಡಲು ವಿಷಯಗಳನ್ನು ತಿರುಚುವುದು. ಅತಿರಂಜಿತಗೊಳಿಸುವುದು ಕೂಡ ನಡೆಯುತ್ತಿದೆ. ಡಾ.ಕಲಬುರ್ಗಿ ಮತ್ತು ಯೋಗೇಶ ಭಟ್ಟರ ವಿಷಯದಲ್ಲಿ ಕೆಲವು ಮಾಧ್ಯಮಗಳು ಅತಿಗೆ ಹೋಗಿ, ಮತ್ತೆ ಮತ್ತೆ ಅದೇ ಅತಿರಂಜಿತ ಸುದ್ದಿಗಳನ್ನು ಪ್ರಸಾರ ಮಡಿ ವಿವಾದಗಳನ್ನು ಎಬ್ಬಿಸಿದ್ದರ ಬಗ್ಗೆ ಅಸಮಾಧಾನ ಕೇಳಿ ಬರುತ್ತಿದೆ. ಅದರ ಪರಿಣಾಮಗಳೇನಾದವು ಎಂಬುದು ಈಗ ನಮ್ಮ ಮುಂದೆಯೇ ಇದೆ.

ಕುಟುಂಬ ಸಲಹೆ, ಕಾನೂನು ಸಲಹೆ, ವೈದ್ಯಕೀಯ ಸಲಹೆಗಳಂಥ ಉಪಯುಕ್ತ ಕಾರ್ಯಕ್ರಮಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಜ್ಯೋತಿಷ್ಯ, ವಾಸ್ತುಗಳಂಥ ವಿಷಯಗಳನ್ನು ವೈಭವೀಕರಿಸುವುದು ಎಷ್ಟರ ಮಟ್ಟಿಗೆ ಸರಿ?

ಇಂಥ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಏನು, ಹೇಗಿರಬೇಕು? ಸತ್ಯಕ್ಕೆ ಅಪಚಾರವಾಗದಂತೆ ಸುದ್ದಿಗಳನ್ನು ಹೇಗೆ ಪ್ರಸಾರ ಮಾಡಬೇಕು? ಇಂಥ ವಿಷಯಗಳಲ್ಲಿ ಮಾಧ್ಯಮಗಳಿಗೆ ಇರಬೇಕಾದಹೊಣೆಗಾರಿಕೆ ಏನು? ಎಂಬ ಪ್ರಶ್ನೆಗಳನ್ನು ಚರ್ಚಿಸುವದು ಈ ಗೋಷ್ಠಿಯ ಉದ್ದೇಶ.

ಪತ್ರಿಕಾ ವ್ಯವಸಾಯದಲ್ಲಿ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಮಹದೇವ ಪ್ರಕಾಶ, ರವೀಂದ್ರ ರೇಷ್ಮೆ, ರಂಗನಾಥ ಭಾರದ್ವಾಜ, ಸಿನಿಮಾ ಕಿರುತೆರೆಗಳ ನಿರ್ದೇಶಕ, ನಾಟಕಕಾರ ಬಿ.ಸುರೇಶ ಗೋಷ್ಠಿಯನ್ನು ನಡೆಸಿಕೊಡುತ್ತಾರೆ.

Leave a Reply