ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೮: ಇಂದೂ ಕಾಡುವ ಅಂದಿನ ಕೃತಿ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೮: ಇಂದೂ ಕಾಡುವ ಅಂದಿನ ಕೃತಿ

ಅನೇಕ ಕಾರಣಗಳಿಂದ, ಒಮ್ಮೆ ಮಹತ್ವವೆನಿಸಿದ ಅನೇಕ ಕೃತಿಗಳು ಕ್ರಮೇಣ ಮರೆವಿಗೆ ಸರಿಯುತ್ತವೆ. ಇನ್ನು ಕೆಲವು ಮಹತ್ವದ ಕೃತಿಗಳು ಓದುಗರ ಗಮನವನ್ನೇ ಸೆಳೆಯದೆ ಕಣ್ಮರೆಯಾಗಿರುತ್ತವೆ. ಇಂದಿಗೂ ಪ್ರಸ್ತುತವಾಗಿರುವ ಅಂಥ ಕೃತಿಗಳನ್ನು ಮತ್ತೆ ಮತ್ತೆ ಓದುಗರ ಗಮನಕ್ಕೆ ತರುವುದು ನಿರಂತರವಾಗಿ ನಡೆಯಬೇಕಾದ ಕೆಲಸ. ಅಂಥ ಒಂದು ಉದ್ದೇಶದ ಗೋಷ್ಠಿ ಇದು.

ರಾ.ಕು. ಅವರ “ಗಾಳಿಪಟ”, ಮಧುರಚೆನ್ನರ ‘ರಮ್ಯಜೀವನ’, ಹ. ಪೀ. ಜೋಶಿಯವರ “ಮಾವಿನ ತೋಪು”, ಕೊಡಗಿನ ಗೌರಮ್ಮನವರ ‘ವಾಣಿಯ ಸಮಸ್ಯೆ’ ಇಂಥ ಕೆಲವು ಹಳೆಯ ಕೃತಿಗಳನ್ನು ವೆಂಕಟಗಿರಿ ದಳವಾಯಿ, ವಿಕ್ರಮ ವಿಸಾಜಿ, ಬಸವರಾಜ ವಕ್ಕುಂದ, ಸಿರಾಜ್ ಅಹಮದ್ ಅವರು ಪರಿಚಯಿಸಿ ಅವುಗಳ ಮಹತ್ವವನ್ನು ಬೆಳಕಿಗೆ ತರುತ್ತಾರೆ.

‘ಶೂದ್ರ’ ಪತ್ರಿಕೆಯ ಸಂಪಾದಕರಾಗಿ ಪ್ರಸಿದ್ಧರಾಗಿರುವ ಶೂದ್ರ ಶ್ರೀನಿವಾಸರು ಈ ಗೋಷ್ಠಿಯನ್ನು ನಡೆಸಿಕೊಡುತ್ತಾರೆ.

Leave a Reply