ನಮ್ಮ ಧಾರ್ಮಿಕ ಧಾರವಾಡ

ನಮ್ಮ ಧಾರ್ಮಿಕ ಧಾರವಾಡ

ಪೂರ್ವಕ್ಕ ವಿದ್ಯಾಗಿರಿ ಮೈಲಾರಲಿಂಗ, ಪಶ್ಚಿಮಕ್ಕೆ ಕೆಲಗೇರಿ ಶಿರಡಿ ಬಾಬಾ, ಉತ್ತರಕ್ಕ ಮುರುಘಾಮಠ, ದಕ್ಷಿಣಕ್ಕ ಶಾಲ್ಮಲಾ ತಟ ಸೋಮೇಶ್ವರನಿಂದ ಆವೃತವಾಗಿ ನಮ್ಮ ಧಾರವಾಡವನ್ನ ಧಾರ್ಮಿಕ ಧಾರವಾಡ ಅನ್ನುವಂಗ ಮಾಡ್ಯಾವರಿ.

ಧಾರವಾಡ ಅಂದ ಕೂಡಲೇ ಪಟ್ಟನೇ ಎಲ್ಲಾರೂ ‘ ಏನ್ರೀ ಧಾರವಾಡ ಪೇಡಾ ಬಾಳ ರುಚಿ ರ್ರೀ,,, ಧಾರವಾಡದಾಗ ಜಿಟಿ ಜಿಟಿ ಮಳಿ ಸಾಕಾಗ್ಯದ’ ಅಂತಾರ. ಅಜಮಾಸ ಒಂದ ಹತ್ತ ಸಾವಿರ ಸ್ಕ್ವೇರ್ ಕಿಲೋಮೀಟರ್ಗೆ ಹಬ್ಬಿ, 2 ಲಕ್ಷ ಮಂದಿ ಜನಸಂಖ್ಯಾ, ಏಳು ಗುಡ್ಡದಾಗ ನಡುವ ಇರುವ ನಮ್ಮ ಧಾರವಾಡ ಕೆಲವು ವರ್ಷಗಳಿಂದ ಬ್ಯಾರೆ ವಿಷಯಕ್ಕೂ ಪ್ರಸಿದ್ಧ. ಗಿರ್ಮಿಟ್ಟ, ಧಾರವಾಡ ಮಂಡಗಿ, ಧಾರವಾಡ ಅಡಗಿ ಭಟ್ಟರು, ಧಾರವಾಡ ಪುರೋಹಿತರು, ಮತು ಧಾರವಾಡದ ಸಾಲಿ, ಕಾಲೇಜ್, ಧಾರವಾಡ ಸಾಹಿತಿಗಳು. ಆದರೆ ಧಾರವಾಡ ಕೆಲವ ವರ್ಷದಿಂದ ‘ಧಾರ್ಮಿಕ ಧಾರವಾಡ’ವೂ ಆಗ್ಯಾದ ಅಂದರ ತಪ್ಪಿಲ್ಲ ನೋಡ್ರೀ.
ಪೂರ್ವಕ್ಕ ವಿದ್ಯಾಗಿರಿ ಮೈಲಾರಲಿಂಗ, ಪಶ್ಚಿಮಕ್ಕೆ ಕೆಲಗೇರಿ ಶಿರಡಿ ಬಾಬಾ, ಉತ್ತರಕ್ಕ ಮುರುಘಾಮಠ, ದಕ್ಷಿಣಕ್ಕ ಶಾಲ್ಮಲಾ ತಟ ಸೋಮೇಶ್ವರನಿಂದ ಆವೃತವಾಗಿ ಮಧ್ಯದಲ್ಲಿ ಉಳವಿ ಚನ್ನಬಸವೇಶ್ವರ, ಜೈನ ಬಸ್ತಿ, ದತ್ತಾತ್ರೇಯ, ರಾಯರ ಮಠ, ಶಂಕರ ಮಠ, ಉತ್ತರಾಧಿಮಠಗಳು ನಮ್ಮ ಧಾರವಾಡವನ್ನ ಧಾರ್ಮಿಕ ಧಾರವಾಡ ಅನ್ನುವಂಗ ಮಾಡ್ಯಾವರಿ. ದಿವಸಾ ಒಂದಿಲ್ಲೊಂದು ಹೋಮ, ಹವನ, ಯಜ್ಞ, ಯಾಗಾದಿ ನಡದ ನಡೀತಾವ . ಪ್ರವಚನ ಅಂತೂ ಇದ್ದ ಇರತಾವ. ಮಾಳಮಡ್ಡಿ ರಾಮಮಂದಿರದಾಗ, ರಾಮಕೃಷ್ಣಾಶ್ರಮ, ಕೇಳಕರ ಮಾರುತಿ ಗುಡ್ಯಾಗ ಇದ್ದ ಇರತಾವ. ಹಿಂಗಾಗಿ ಎಲ್ಲಾ ಕಡೆಯಿಂದ ಮಂದಿ ಧಾರವಾಡ ಬಾಳ ಚೊಲೊರ್ರಿ ಅನ್ನಕೊತ ನಿವೃತ್ತಿ ಜೀವನ ಕಳಿಲಿಕ್ಕೆ ಧಾರವಾಡ ಸ್ಥಾಯಿ ಆಗಲಿಕತ್ತಾರ. ಅಂದ್ಹಾಂಗ ವಿದ್ಯಾಗಿರಿ ದಾನೇಶ್ವರಿ ನಗರದಾಗ ಒಂದು ಹೊಸ ರಾಮಮಂದಿರ, ವೇದಪಾಠಶಾಲಾ ಆಗಲಿಕತ್ತದ. ನುಗ್ಗಿಕೇರ್ಯಾಗ ಒಂದು ರಾಮಮಂದಿರ ನಿರ್ಮಾಣ ನಡದದ, ಧಾರವಾಡ ಸಮೀಪ ಹೆಬ್ಬಳ್ಯಾಗ ದಿನನಿತ್ಯ ರಾಮನಾಮ ನಡದಿರತದ. ಚಿನ್ಮಯ ಮಿಶನ್ದಿಂದ ಭಗವದ್ಗೀತಾ, ಧರ್ಮ ಸಂಸ್ಕೃತಿ ಪ್ರತಿಷ್ಠಾನದಿಂದ ಅನೇಕ ಧಾರ್ಮಿಕ ಕಾರ್ಯಕ್ರಮ, ಸ್ಪರ್ಧಾ ಕಾಯಂ ನಡದ ನಡಿತಾವ. ಹಿಂಗ ನಮ್ಮ ಧಾರವಾಡ ಧಾರ್ಮಿಕ ಧಾರವಾಡ ಆಗಿ ಎಲ್ಲರಿಗೂ ಎಲ್ಲಾ ರೀತಿ ಅನುಕೂಲ ಆಗ್ಯದರ್ರೀ. ಸಾಕ್ರಿ ಸಾಕು ಬರ್ತೀನಿ, ಧಾರವಾಡಕ್ಕ ಬರ್ರಿ ಮತ್ತ.

 

– ವಿಜಯ  ಇನಾಮದಾರ ,  ಧಾರವಾಡ

Leave a Reply