ದೇವರಿಗೊಂದು ಪತ್ರ! ( 42)

ದೇವರಿಗೊಂದು ಪತ್ರ!( 42)

ಹೇಗೆ ಇರುವೆ ಹೇಳು ನೀನು ಎನ್ನ ಹೃದಯದ ದೈವ? ಜಗದ್ರಕ್ಷಕ!

ನನಗಂತೂ ಹಾದಿ ಬೇರೆಯೇ ತೋರಿದೆ ನೀನು! ಜಗದ್ಬಂಧು!

ಈ ಪತ್ರ ಒಂದರ್ಥದಲ್ಲಿ ನಿನ್ನ ಉತ್ತರದ್ದೇ ಇರಬಹುದು! ಜನಾರ್ದನ!

ಹೇಳುವುದು ಬಹಳವಿದೆ ಹರಿ ಮಾತು ಬರುತ್ತಿಲ ಅಕ್ಷರ ಸಾಲುತ್ತಿಲ್ಲ ಜಗತ್ಕಾರಣ!

ನನ್ನಾತ್ಮದ ಮೂಲೆ ಮೂಲೆಯಲಿ ನಿನ್ನ ನಾಮಸ್ಮರಣೆಯೊಂದೆ ಜಗನ್ನಾಥ!

ಗೊತ್ತೆನಗೆ ಈ ದೇಹ ಬಿಡುತ್ತಿಲ್ಲ ವಾಸನೆಗಳ ಮರ್ಕಟನಂತೆ ಮಾಧವ!

ಚಿತ್ತ ಚಂಚಲತೆಯಲಿ ತೇಲುವುದು ಆಗೊಮ್ಮೆ ಈಗೊಮ್ಮೆ ಮಧುಸೂದನ!

ಮೋಹದ ಬಲೆಯಲ್ಲಿ ಬೀಳುವುದು ಎಡವಿ ಎಡವಿ ಮುರಾರಿ!

ಸಂತೆಯೊಂದುಂಟು ಮತ್ತು ಬರಿಸುವುದು ಸುತ್ತುಗಟ್ಟಿ ಸೆಳೆವುದಯ್ಯ ಮೇಘಶ್ಯಾಮ!

ಬರಿ ಮುತ್ತು ರತ್ನ ಗಳಿಂದಲಿ ಬಾಯಲಿ ನೀರೂರುವುದು ಕ್ಷಣದಲಿ ಮನೋಹರ!

ಆ ಸಂತೆ ಈ ಸಂತೆ ಸೆಳೆತಕ್ಕೆ ಮನ ಸೋಲುವುದು ಮಥುರಾದೀಶ!

ಹೋಗ್ಹೋಗಿ ಬರುವುದು ಈ ದೇಹ ಅದರ ಸುತ್ತ ಒಮ್ಮೊಮ್ಮೆ ಮುರಳೀಧರ!

ಆದರೂ ಹೇಳುವೆ ಕೇಳು! ಸತ್ಯವಿದು ಸುಳ್ಳಲ್ಲ ಮುಕುಂದ!

ನಿತ್ಯ ಕಾಯಕದಲ್ಲಿ ಉಣ್ಣುವಾಗ ನಗುವಾಗ  ಅಳುವಾಗ ಅಚ್ಚ್ಯುತನೆ!

ಹೇಳುವಾಗ ಕೇಳುವಾಗ  ನಡೆವಾಗ ನಿಂತಾಗ ಹೃದಯವೆಂಬ ಬಡಿತದಲ್ಲಿ ನೀ ಸದಾ ಇರುವೆ ಆಚಲಾದೀಶ!

ನಿನಗಾಗಿ ಹಂಬಲಿಸುತಿಹ ಈ ಆತ್ಮದ ಅಳಲು ನೀ ಅರಿತಿರುವೆ ನಾ ಬಲ್ಲೆ ಜ್ಞಾನೇಶ್ವರ!

ಇನ್ನೂ ನೂರು ಮಾತು ಹೇಳುವುದಿದೆ ಹರಿ ಬೇಸರಿಸಬೇಡ ನನ್ನಯ್ಯ

ಮತ್ತೆ ಬರೆಯುವೆ ಮನದಿಂಗಿತವ ಮತ್ತಾರೂ ಅರಿಯರು ಈ ನನ್ನ ನಿನ್ನ ಸಂಭಾಷಣೆಯ!

ಉಮಾ ಭಾತಖಂಡೆ.

Leave a Reply