ಮಣ್ಣಿನ ಮಕ್ಕಳ ಮಣ್ಣೆತ್ತಿನ ಹಬ್ಬ

ಮಣ್ಣಿನ ಮಕ್ಕಳ ಮಣ್ಣೆತ್ತಿನ ಹಬ್ಬ….!
ಬಾಲ್ಯದ ಮಧುರ ನೆನಪುಗಳಲ್ಲಿ ಮಣ್ಣೆತ್ತಿನ ಹಬ್ಬದ ಸಂಭ್ರಮ ತುಂಬಾ ವಿಶಿಷ್ಟವಾದದ್ದು ಜೇಷ್ಠ ಬಹುಳ ಅಮಾವಾಸ್ಯೆಯನ್ನು ಬಸವನ ಅಮಾವಾಸ್ಯೆ ಮಣ್ಣೆತ್ತಿನ ಅಮಾವಾಸ್ಯೆ ಎಂದು ಮಲೆನಾಡು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಶ್ರದ್ಧಾ-ಭಕ್ತಿಯೊಂದಿಗೆ ಆಚರಿಸಲಾಗುತ್ತದೆ. ಇದು ಮುಂಗಾರಿನ ಆರಂಭದ ಹಬ್ಬ.
ಭೂಮಿಯನ್ನು ತಾಯಿಯೆಂದೇ ಪೂಜಿಸುವ ಪ್ರೀತಿಸಿ, ಗೌರವಿಸುವ ರೈತಾಪಿ ವರ್ಗದ ಮಹತ್ವದ ಆಚರಣೆ ತುಂಬಾ ವಿಶೇಷವಾದುದು.
ವ್ಯವಸಾಯದ ಕಾರ್ಯಕ್ಕೆ ನೆರವು ನೀಡುವ ಎತ್ತುಗಳನ್ನು ಸಾಂಕೇತಿಕವಾಗಿ ಗೌರವಿಸುವುದು ಇದರ ಹಿಂದಿನ ಉದ್ದೇಶ. ಅಲ್ಲದೇ ಮಳೆ ಬೆಳೆ ಚೆನ್ನಾಗಿ ಆಗಲೆಂದು ಭಗವಂತನ ಕೋರಿಕೊಳ್ಳುವ(ಕೃಷಿ ವರ್ಷಾರಂಭದ) ಹಬ್ಬವಾಗಿ, ಮಣ್ಣಿನಿಂದ ಎತ್ತುಗಳ ಮೂರ್ತಿ ತಯಾರಿಸಿ ಮನೆಯಲ್ಲಿಟ್ಟು ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಹಿಂದೆ ಕೃಷಿ ಚಟುವಟಿಕೆಗಳು ಪ್ರಾರಂಭವಾಗಲು ಇದು ಶುಭ.
ಮೂಹರ್ತವಾಗಿತ್ತು ಸಗ್ಗಿಯ ನಂತರ ಅಮಾವಾಸ್ಯೆಯ ದಿನ ಕೃಷಿಕರು ನಸುಕಿನಲ್ಲಿಯೇ ಎದ್ದು ಹೊಲಕ್ಕೆ ಹೋಗಿ ಒಂದು ಬಗೆಯ ಮೃದುವಾದ ಜಿಗುಟು(ಜೇಡಿ) ಮಣ್ಣನ್ನು ತಂದು ಸ್ವತಃ ಬನವಣ್ಣನ ಜೋಡಿ ಮೂರ್ತಿಗಳನ್ನು ತಯಾರಿಸುತ್ತಾರೆ. ಕೆ¯ವೆಡೆ ಕುಂಬಾರರ ಮನೆಯಿಂದ ಕೊಂಡು ತರುವುದೂ ಉಂಟು. ಈ ಮಣ್ಣೆತ್ತಿನ ಹಬ್ಬ. ಮಕ್ಕಳ ಹಬ್ಬ ಚಿಕ್ಕಮಕ್ಕಳಿಗೆ ಸಂತಸ ತರುವ ಹಬ್ಬವೂ ಹೌದು. ಹೀಗಾಗಿ ಮಕ್ಕಳ ಕೈಯಲ್ಲಿ ಮೂರ್ತಿ ತಯಾರಾಗುವುದೇ ಹೆಚ್ಚು ಹೀಗೆ ಸಿದ್ಧಪಡಿಸಿದ ಮಣ್ಣೆತ್ತಿಗೆ ವಿವಿಧ ಬಣ್ಣದ ದಾರಗಳಿಂದ ಮೂಗುದಾರ ಕೊರಳಿಗೆ ಕುಚ್ಚಿನ ಮಾಲೆ, ಕೋಡಿಗೆ ವಿವಿಧ ಬಣ್ಣ, ಬ್ಯಾಗಡೆಗಳಿಂದ ಅಲಂಕರಿಸುವುದು ಮಕ್ಕಳ ಕೈವಾಡವೇ ಆಗಿತ್ತು. ಶೃಂಗರಿಸುವುದಕ್ಕೆ ಆಗ ಎರಡು ಕೈಗಳು ಏನೇನು ಸಾಲದು ಅನ್ನಿಸುತ್ತದೆ. ಮಾವಿನ ತೋರಣ, ಹೂವುಗಳಿಂದ ಅಲಂಕರಿಸಿದ ಪೀಠದ ಮೇಲೆ ಸಿಂಗಾರಗೊಂಡ ಬಸವಣ್ಣನ ಮೂರ್ತಿಗಳು ತಮ್ಮ ವಿಶಿಷ್ಟ ನೋಟ ಆಕರ್ಷಕ ಅಲಂಕಾರದಿಂದ ನೋಡುಗರ ಚಿತ್ತ ಸೆಳೆಯುತ್ತ ಭಕ್ತರ ಮನೆ, ಮನ ತುಂಬಿಸುತ್ತವೆ.
ಮನೆ ಮಂದಿಯೆಲ್ಲ ಕೂಡಿ ಅಲಂಕರಿಸಿದ ಬಸವಣ್ಣನಿಗೆ ಹೋಳಿಗೆ ಕಡಬು, ಸಜ್ಜಿಗೆ ಮುಂತಾದ ಸಿಹಿ ತಿನಿಸುಗಳನ್ನೂ ವಿವಿಧ ಭಕ್ಷಗಳನ್ನಲ್ಲದೇ, ಹಣ್ಣು –ಕಾಯಿ ಇಟ್ಟು ಕರ್ಪೂರ, ಲೋಬಾನ, ಊದುಬತ್ತಿಗಳನ್ನು ಬೆಳಗಿ ಮಂಗಳಾರತಿಯೊಂದಿಗೆ ನೈವೇದ್ಯ ಅರ್ಪಿಸಿ ಭಕ್ತಿ-ಭಾವದೊಂದಿಗೆ ವಿಶೇಷ ಪೂಜೆ ಮಾಡುವರು. ಈ ದಿನ ಪ್ರತಿ ಮನೆಗಳಲ್ಲೂ ಚಕ್ಕುಲಿ ವಿಶೇಷ ತಿನಿಸು. ಬಂದ ಎಲ್ಲರಿಗೂ ಪ್ರಸಾದ ವಿನಿಯೋಗ ನಡೆಯುತ್ತದೆ. ನಂತರ ಊರ ಮುಂದೆ ಮೆರವಣಿಗೆಯಲ್ಲಿ ಕೊಂಡು ಹೋಗಿ ನೀರಿನಲ್ಲಿ ವಿಸರ್ಜಿಸುವುದು ಪ್ರದೇಶವಾರು ಆಚರಣೆಯಲ್ಲಿ ಕೊಂಚ ವೈವಿಧ್ಯ ಕಂಡು ಬಂದರೂ ಒಟ್ಟಾರೆ ‘ಮಣ್ಣೆತ್ತಿನ ಹಬ್ಬ’ ಅಂದ್ರೆ ಎತ್ತುಗಳಿಗೆ ಪೂಜೆ ಮಾಡುವ ಹಬ್ಬ. ತಾವು ನಂಬಿದ ಭೂಮಿ-ಬಸವ ತಮನ್ನು ಕಾಯುತ್ತದೆ ಎಂಬ ಅಚಲ ನಂಬಿಕೆ. ಹಳ್ಳಿ ಸಂಸ್ಕøತಿಯ ಸುಗಂಧ ಇದು; ಶ್ರಮಾಧರಿತೆ ಜೀವಿಯೊಬ್ಬನ ನಮ್ರ ಭಾವ ಧನ್ಯತೆಯ ಅಭಿವ್ಯಕ್ತಿ…!
ಇತ್ತೀಚಿನ ದಿನಗಳಲ್ಲಿ ಕೃಷಿ ಯಾಂತ್ರೀಕರಣ, ತಾಂತ್ರೀಕರಣಗೊಳ್ಳುತ್ತಿರುವುದರಿಂದ ವ್ಯವಸಾಯದಲ್ಲಿ ಪ್ರಾಣಿಗಳ ಉಪಯೋಗ ಬಹು ಮಟ್ಟಿಗೆ ಕಡಿಮೆಯಾಘಿದೆ. ಉತ್ತು-ಬಿತ್ತುವುದರಿಂದ ಹಿಡಿದು ಬೆಳೆ ಕಟ್ಟಾವು ಸಂಸ್ಕರಣದವರೆಗೂ ಯಂತ್ರಗಳಲ್ಲದೇ ಪಾರುಪತ್ಯ.(ಜನಸಂಖ್ಯೆ ಕಡಿಮೆ ಇರುವ ದೇಶಕ್ಕೆ ಇದು ಅನುಕೂಲವಾಗಬಹುದು. ಆದರೆ ಜನ ಸಂಖ್ಯೆ ಜಾಸ್ತಿಯಾಗಿರುವ ದೇಶಕ್ಕೆ ಇದು ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತೆ…?)
ನಗರೀಕರಣದಿಂದಾಗಿ ವ್ಯವಸಾಯದ ಜಮೀನುಗಳೆಲ್ಲ ಸೈಟುಗಳಾಗಿ, ಮನೆಗಳೆದ್ದು ಬಿಟ್ಟಿವೆ. ಮಣ್ಣಿನ ಆಮ್ಲೀಕರಣ, ಭೂಸವೆತ, ಅತಿಯಾದ ರಾಸಾಯನಿಕಗಳ ಬಳಕೆ ಇವುಗಳಿಂದ ಮಣ್ಣಿನ ಕಾರ್ಯಶೀಲತೆ ಕಡಿಮೆಯಾಗಿ ಬೇಸಾಯದ ಹುಟ್ಟುವಳಿಗಳ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಅಷ್ಟಕ್ಕೂ ಕೃಷಿ ಇಂದು ನಮ್ಮ ಆದ್ಯತೆಯಾಗಿ ಉಳಿದಿದೆಯೇ..? ಬದಲಾಗುವ ಹವಾಗುಣ, ಅರಣ್ಯನಾಶ, ಕಾರ್ಮಿಕರ ಕೊರತೆ ಯುವಜನರ ವಲಸೆ, ಅಂತರ್ಜಲ ಕುಸಿತ ಇವೆಲ್ಲ ಕಾರಣಗಳಿಂದ ಬೇಸಾಯದಲ್ಲಿ ಜನರ ಆಸಕ್ತಿ ಕಡಿಮೆಯಾದಂತೆ, ‘ಮಣ್ಣೆತ್ತಿನ ಹಬ್ಬ’ ವೆಂಬ ಸಂಪ್ರದಾಯ ತೆರೆ ಮೆರೆಗೆ ಸಂದದ್ದು ಬೇಸರದ ಸಂಗತಿ.
ಮಣ್ಣು ಮತ್ತು ಮರವನ್ನು ಪೂಜಿಸುವ ನಮಗೆ ನಮ್ಮ ಪಾರಂಪರಿಕ ಕೃಷಿ ಒಂದು ಜೀವನ ವಿಧಾನವಾಗಿತ್ತು. ಹೀಗಾಗಿ ನಾವು ನಮ್ಮ ಕೃಷಿ ಪರಂಪರೆ, ಆಚರಣೆ ಅವುಗಳ ಹಿಂದಿನ ತಾತ್ವಿಕತೆಯನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ. ಪ್ರಕೃತಿಗೆ ಪೂರಕವಾದ ಬದುಕಿಗೆ ಸಂಗತವಾದ, ಸಮಷ್ಟಿಗೆ ಎರವಾಗದಂತಹ ಕೃಷಿಯಲ್ಲಿ ನಾವು ಸಾಫಲ್ಯ ಕಾಣಬೇಕು. ಇದು ಇಂದಿನ ತುರ್ತು ಅಗತ್ಯ ಕೂಡಾ ಆ ಕಾಲದ ಬಿತ್ತನೆ, ಸುಗ್ಗಿಯ ಸಂಭ್ರಮದ ನೋಟಗಳು ಕಾಲದ ಹೊದಿಕೆಯೊಳಗೆ ಮರೆಯಾಗಿ ಈಗೊಂದೆರಡು ಮೂರು ದಶಕಗಳ ಹಿಂದೆ ತೆನೆತೆನೆಯಲ್ಲೂ ಸಮೃದ್ಧಿ ಕಂಡ ಕೃಷಿಕರು ಇವತ್ತು ಕಾಳುಕಾಳಿಗೂ ಯೋಚಿಸುವಂತಾಗಿರುವುದು ವಿಚಿತ್ರ ಅಷ್ಟೇ ಅಲ್ಲ ವಿಪರ್ಯಾಸವೂ ಹೌದು…!!
ಹೊಸ್ಮನೆ ಮುತ್ತು

Leave a Reply