ಶ್ರೀ ವಿಷ್ಣು ಸಹಸ್ರನಾಮ — ಭಾಗ 5

ಶ್ರೀ ಗುರುಭ್ಯೋ ನಮಃ ಹರಿಃ ಓಂ

ಮಕ್ಕಳಿಗೆˌ ವಿದ್ಯಾರ್ಥಿಗಳಿಗೆˌ ಒಳ್ಳೆಯ ಬುದ್ಧಿˌ ಒಳ್ಳೆಯ ಭಾವನೆˌ ಗುರುಹಿರಿಯರಲ್ಲಿ ಗೌರವˌ ವಿದ್ಯೆಯಲ್ಲಿ ಆಸಕ್ತಿˌ ಓದಿದ್ದು ನೆನಪಿನಲ್ಲಿ ಉಳಿಯಬೇಕಾದರೆˌ ಅಭ್ಯಾಸದಲ್ಲಿ ಉತ್ತಮ ಯಶಸ್ಸು ಗಳಿಸಬೇಕಾದರೆˌ ಶಿಕ್ಷಣದಲ್ಲಿ ಯಾವ ಅಡೆತಡೆಗಳಿಲ್ಲದೆ ಹಂತಹಂತವಾಗಿ ಮುಂದಿನ ತರಗತಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ ಯಶಸ್ವಿ ವಿದ್ಯಾರ್ಥಿ ಅಂತ ಆಗಬೇಕಾದರೆ ಈ ಸ್ತೋತ್ರವನ್ನು ಹೇಳಿಕೊಳ್ಳಬೇಕು. ತುಂಬಾ ಚಿಕ್ಕವರಾದರೆ ಮಕ್ಕಳ ಪರವಾಗಿ ತಂದೆ-ತಾಯಿಯರು ಹೇಳಿಕೊಳ್ಳಬಹುದು.
ಸರ್ವಗಸ್ಸರ್ವವಿದ್ಭಾನುಃ ವಿಷ್ವಕ್ಸೇನೋ ಜನಾರ್ಧನ |
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ||
ನಮ್ಮ ಎಲ್ಲ ಸಂಕಲ್ಪಗಳೂ ಸಿದ್ಧಿಸಬೇಕಾದರೆˌನಾವು ಅಂದುಕೊಂಡ ಕೆಲಸ ಆಗಬೇಕಾದರೆˌ ನಮ್ಮ ಆಸೆ ಆಕಾಂಕ್ಷೆಗಳು ಈಡೇರಬೇಕಾದರೆˌ ಕೈಹಿಡಿದ ಕೆಲಸ ಫಲಪ್ರದವಾಗಲುˌ ನಮ್ಮ ಚಿಂತನೆಗಳಿಗೆ ಒಂದು ರೂಪ ಬಂದು ಅವು ಯಶಸ್ವಿಯಾಗಿ ಸಾಧನೆಯ ಹಂತಕ್ಕೆ ಬರಬೇಕಾದರೆ ಈ ಸ್ತೋತ್ರವನ್ನು ಹೇಳಬೇಕು. ನಾವು ಮಾಡುವ ಕೆಲಸಕ್ಕೆ ಏನಾದರೂ ಅಡೆತಡೆ ಇದ್ದಲ್ಲಿˌ ನಿರ್ಬಂಧವಿದ್ದಲ್ಲಿˌ ಸುಗಮವಾಗಿ ನಡೆಯಲು ಅಡ್ಡಿ-ಆತಂಕಗಳು ಇದ್ದಲ್ಲಿ ಈ ಸ್ತೋತ್ರವನ್ನು ಹೇಳಿಕೊಳ್ಳಬೇಕು. ಅಸಂಖ್ಯೆಯೋ ಪ್ರಮೇಯಾತ್ಮಾ ವಿಶಿಷ್ಠಃ ಶಿಷ್ಟಕೃಚ್ಫುಚಿಃ|
ಸಿದ್ಧಾರ್ಥಃ ಸಿದ್ಧ ಸಂಕಲ್ಪಃ ಸಿದ್ಧಿದಃ ಸಿದ್ಧಿ ಸಾಧನಃ||
ನಾಹಂ ಕರ್ತಾ ಹರಿಃ ಕರ್ತಾ
(ಮುಂದುವರಿಯುವದು)

Leave a Reply