ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ

ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ

ನಮ್ಮನೆಯ ಮುಂದೆಯೇ ಒಂದು ಮೈದಾನ..
ಹೆಸರಿಗೆ ಮಕ್ಕಳ ಆಟಕ್ಕೆ, ನಡೆಯುವದೆಲ್ಲ
ದೊಡ್ಡವರ ಬಂಡಾಟ… ಹಾರಾಟ…
ಆಗಾಗ ಕಲ್ಲುತೂರಾಟ…..
ಹೊತ್ತು ಗೊತ್ತಿನ ಪರಿವೆಯಿಲ್ಲದೇ
ಧ್ವನಿವರ್ಧಕಗಳ ಚೀರಾಟ…
ಯಾವ ಸಾಮ, ದಾನ, ಭೇದ, ದಂಡೋಪಾಯಗಳಿಂದಲೂ
ಇದನ್ನು ಬದಲಿಸಲಾಗಿಲ್ಲ….
ಮೊದಲಿನಿಂದಲೂ ಮೊಳೆ ಹೊಡೆದುಕೊಂಡಂತೆ
ಸ್ಥಾಪಿತಗೊಂಡ ಪಟ್ಟಭದ್ರ ಹಿತಾಸಕ್ತಿಗಳ
ಬಿಗಿ ಮುಷ್ಟಿಯಲ್ಲಿ ನಲುಗುತ್ತಿರುವ
ಜನಸಾಮಾನ್ಯರ ಗತಿಯೇನೆಂಬುದೇ
ಯಾವ ಯುಧಿಷ್ಠಿರನೂ ಉತ್ತರಿಸಲಾಗದ
ಯಕ್ಷ ಪ್ರಶ್ನೆ…..

Leave a Reply