ಚೌಕಟ್ಟಿನ ಚಿತ್ರ

ಚೌಕಟ್ಟಿನ ಚಿತ್ರ

ಹರಿದು ಮೀರುತಲಿ
ಸಿದ್ಧ ಅಳತೆಯ ಚೌಕಟ್ಟ
ಬೆಳಿಸಬೇಕಿದೆ ಕಂದಾ…
ಈ ನಿನ್ನ ಘನ ವ್ಯಕ್ತಿತ್ವ
ಹಿಂದೆ ಯಾರೋ ಎಂದೋ
ಕೊರೆದಿಟ್ಟ ಈ ಕಿರಿಯ
ಚೌಕಟ್ಟಿಗೆಂದೇ
ಕಿರಿದಾಗಿಸುವಿ ಏಕೆ…?
ಈ ನಿನ್ನ ಭವ್ಯ ಭವಿತವ್ಯ
ಚೆಂದದೀ ಚೌಕಟ್ಟಿಗೆ
ಅಂದ ಚಿತ್ರವೇ ತಾನೆನುತ
ಬೋನ್ಸಾಯ್ ತೆರದಿ
ಕುಬ್ಜಗೊಳಿಸುವುದು ತರವೇ…?
ಬೆಳೆವ ಈ ನಿನ್ನ ಹಿರಿ ವ್ಯಕ್ತಿತ್ವ
ಕ ಣ್ಣು ಮುಚ್ಚುವಾಟ ಸಾಕಿನ್ನು.
ಬಿಗಿಗೊಂಡ ಮನವನುತ್ತುತ್ತ
ಉತ್ಸಾಹ, ನಂಬಿಕೆ.
ಕನಸುಗಳ ಬೀಜ ಬಿತ್ತಿ.
ಬೆಳೆಸಬೇಕಿದೆ ನೀನೆ ನಿನ್ನ ವ್ಯಕ್ತಿತ್ವ
ಜಗದಗ¯…. ಮುಗಿದಗಲ

ಹೊಸ್ಮನೆ ಮುತ್ತು

Leave a Reply