ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೨

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೨

ಇತ್ತಿಚಿನ ದಿನಗಳಲ್ಲಿ ನಾವು ನಮ್ಮ ಯುವಶಕ್ತಿಯ ಒಂದು ಸರಿಯಾದ ಉಪಯೋಗವನ್ನು ಹೇಳಬಹುದಾದರೆ, ದೆಹಲಿಯ ಮೆಟ್ರೋ ನಿರ್ಮಾಣದಲ್ಲಿ! ಈ ಮೆಟ್ರೋ ನಿರ್ಮಾಣದಲ್ಲಿ ತೊಟಗಿದ್ದ ೯೫% ಕೆಲಸಗಾರರು ಯುವಕರೇ! ಅವರಿಗೆ ಮಾರ್ಗದರ್ಶನವನ್ನು ಮಾಡಿದವರು ಒಬ್ಬ ಅನುಭವಿ ವ್ಯಕ್ತಿಯೇ ಆಗಿದ್ದರೂ ಕೆಲಸವಗಾರರು ಮಾತ್ರ ಯುವಕರೇ! ಇದರಿಂದ ಒಂದು ಮಾತು ಸ್ಪಷ್ಟವಾಗುತ್ತದೆ- ಸರಿಯಾದ ಮಾರ್ಗದರ್ಶನ ಹಾಗೂ ಅದಮ್ಯ ಇಚ್ಛಾಶಕ್ತಿಯಿದ್ದಲ್ಲಿ ಯಾವುದೂ ಅಶಕ್ಯವಲ್ಲ! ಈ ಶಕ್ತಿಗೆ ಒಂದು ಉಚಿತವಾದಂಥ ಗುರಿಯು ದೊರೆಯದಿದ್ದಲ್ಲಿ ಇದು ರಾಷ್ಟ್ರವಿನಾಶಕವೂ ಕೂಡ ಆಗಬಹುದಾಗಿತ್ತು. ಇಂದಿನ ಯುವಕರು ತಿಂದುಂಡು ಮಜಾ ಮಾಡುವ ಸಂಸ್ಕತಿಯಿಂದ ಹೊರಬಂದು ದೇಶದ ಆಡಳಿತದ ವ್ಯವಸ್ಥೆಯಲ್ಲಿ ಸಕ್ರಿಯ ನೇತೃತ್ವವನ್ನು ವಹಿಸಬೇಕಾಗಿದೆ. ಅನುಭವಸ್ಥರಾದ ಹಾಗೂ ಪ್ರಾಮಾಣಿಕರಾದಂಥ ಹಿರಿಯರು ಹಾಗೂ ಪ್ರಾಮಾಣಿಕರಾದಂಥ ಬುದ್ಧಿವಂತರೊಂದಿಗೆ ಸೇರಿಕೊಂಡು ದೇಶದ ಸಕಾರಾತ್ಮಕವಾದಂಥ ಮುಂದಾಳುತ್ವವನ್ನು ವಹಿಸಬೇಕು. ನಮ್ಮ ದೇಶದಲ್ಲಿ ಇಂದು ನಮ್ಮ ಯುವಕರಿಗೆ ಒಳ್ಳೆಯ ಮಾರ್ಗದರ್ಶನದ ಅಭಾವವಿದೆ. ಇಲ್ಲವಾಗಿದ್ದರೆ ಇಂದು ಯೋಗ್ಯ ವ್ಯಕ್ತಿಯ ಆಯ್ಕೆಯ ಬದಲಾಗಿ ಇಲ್ಲಿ ದೇಶದ ಚುಕ್ಕಾಣಿಯು ವಂಶಪಾರಂಪರ‍್ಯದ ಮೂಲದ ಮೇಲೆ ನಿಲ್ಲುತ್ತಿರಲಿಲ್ಲ!

ಎಲ್ಲರಿಗೂ ತಿಳಿದಿರುವಂತೆ ಅನೇಕ ವರ್ಷಗಳ ಹಿಂದೆ ದೆಹಲಿಯಲ್ಲಿ ಒಂದು ಐತಿಹಾಸಿಕ ರೀತಿಯ ಆಂದೋಲನವಾಯಿತು. ಅನ್ನಾ ಹಜಾರೆಯವರ ಮುಂದಾಳುತ್ವದಲ್ಲಿ ಆದಂಥ ಈ ಆಂದೋಲನದ ಮುಖ್ಯ ಶಕ್ತಿಯು ಯುವಕರದೇ ಆಗಿತ್ತು. ಇದು ಹಣ ಕೊಟ್ಟು ಕರೆತಂದ ಜನರ ಗುಂಪಾಗಿರಲಿಲ್ಲ. ಇವರೆಲ್ಲ ಸ್ವಸ್ಫೂರ್ತಿಯಿಂದ ಬಂದಂಥ ಯುವಕರು! ಅದು ಭ್ರಷ್ಟಾಚಾರ ಹಾಗೂ ಅಧಿಕಾರದಾಹಿಗಳ ವಿರುದ್ಧದ ಆಂದೋಲನವಾಗಿತ್ತು. ಅವರೆಲ್ಲರೂ ಅನ್ನಾ ಹಜಾರೆಯವರ ನೇತೃತ್ವದಲ್ಲಿ ಕ್ರೂರ, ಅತ್ಯಾಚಾರಿಗಳ, ಈ ಆಡಳಿತದಿಂದ ಬೇಸತ್ತುಹೋದ ಯುವಕರು. ದೇಶದ ಆಡಳಿತದ ವಿರುದ್ಧ ಸಿಡಿದೆದ್ದರು. ಆ ಯುವಕರಲ್ಲಿ ಅದೆಷ್ಟು ಜನ ಸುಭಾಷಚಂದ್ರ ಬೋಸರಿದ್ದರೋ, ಭಗತಸಿಂಗರಿದ್ದರೋ, ಝಾನ್ಸಿ ಲಕ್ಷ್ಮೀ ಬಾಯಿಯರಿದ್ದರೋ.. ಆದರೆ ಮಹಾ ದೇಶಭಕ್ತರಾದಂಥ ಅನ್ನಾರವರು ಆ ಯುವಜನರಿಗೆ ಅಹಿಂಸೆಯ ಮಾರ್ಗವನ್ನು ಬೋಧಿಸಿದರು. ಗಾಂಧೀಜಿಯವರ ಸಿದ್ಧಾಂತಗಳಿಗನುಸಾರವಾಗಿ ನಡೆದು ಗಾಂಧೀಜಿಯವರಿಗಿಂತಲೂ ದೊಡ್ಡದಾದ ಆಂದೋಲನವನ್ನೇ ಮಾಡಿದ್ದರು. ಆದರೆ ಅದೂ ಕೂಡ ಅನೇಕ ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಿ ಅಲ್ಲಿಯೇ ಕಮರಿಹೋಯಿತು.

ಜಗತ್ತು ಕೇವಲ ಹಣದ ಮೇಲೆ ನಿಂತಿಲ್ಲ. ಯುವಕರು ತಮಗೆ ದಕ್ಕಬಹುದಾದ ಪ್ರತಿಫಲಕಿಂತಲೂ ಹೆಚ್ಚು ಕೆಲಸ ಮಾಡಿದರೆ ಅವರು ತಮ್ಮ ಮಾರ್ಗದಲ್ಲಿ ಸಫಲತೆಯನ್ನು ಪಡೆಯುವುದನ್ನು ಜಗತ್ತಿನ ಯಾವುದೇ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಒಂದು ಯಾವುದೋ ಸಂಘಟನೆಯೋ, ವ್ಯಕ್ತಿಯೋ ಸಫಲನಾಗಿದ್ದಾನೆಂದರೆ ಅದು ಇದೇ ಸಿದ್ಧಾಂತದ ಬಲದಿಂದಲೇ. ಒಂದು ವೇಳೆ ಯಾರೇ ಆಗಲಿ, ನನಗೆ ಈ ಜಗತ್ತಿನಿಂದ ಎಷ್ಟು ದೊರೆತಿದೆಯೋ ಅದಕ್ಕಿಂತಲೂ ಹೆಚ್ಚು ಈ ಜಗಕ್ಕೆ ಹಿಂತಿರುಗಿಸಬಯಸುತ್ತೇನೆ ಎಂದರೆ ಅವನು ಈ ಜಗತ್ತಿನ ಪ್ರತಿಯೊಂದನ್ನೂ ಸಾಧಿಸಬಲ್ಲವನಾಗಿದ್ದಾನೆ ಎಂದು ತಿಳಿಯಬಹುದಾಗಿದೆ. ಅನೇಕ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರ ಅಭಿಮತದಲ್ಲಿ ಭಾರತವು ಇಂದು ಇಡೀ ಜಗತ್ತಿನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ರೂಪದಿಂದ ಅತ್ಯಂತ ದೊಡ್ಡ ಮಹಾಶಕ್ತಿಯಾಗಿ ಹೊರಹೊಮ್ಮುತ್ತಲಿದೆ. ಇತ್ತೀಚೆಗೆ ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ಯುರೋಪಿಯನ್ ಇನ್‌ಸ್ಟಿಟ್ಯೂಟ್ ಫಾರ್ ಸೆಕ್ಯೂರಿಟಿ ಸ್ಟಡಿಜ್‌ದ ಗ್ಲೋಬಲ್ ಗಬರ್ನೆಸ್ ರಿಪೋರ್ಟು ೨೦೨೫ರಲ್ಲಿ ಭಾರತವು ಅಮೆರಿಕಾ ಹಾಗೂ ಚೀನದ ನಂತರ ಎಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚು ಶಕ್ತಿಯುತ ರಾಷ್ಟ್ರವೆಂದು ಪರಿಗಣಿತವಾಗಲಿದೆ ಎಂದು ಹೇಳಲಾಗಿದೆ. ವಿಶ್ವ ಮಟ್ಟದಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದ ಭಾರತದ ಯುವಕರು ಇಂದು ಆರ್ಥಿಕ ವಿಕಾಸ ಹಾಗೂ ರಾಷ್ಟ್ರೀಯ ಅರ್ಥವ್ಯವಸ್ಥೆಗೆ ಒಂದು ಮಾನ ದಂಡವಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಭಾರತವು ತನ್ನಲ್ಲಿಯೇ ಹುದುಗಿರುವ ಈ ವಿಶ್ವ ಶಕ್ತಿಯನ್ನು ಯಾರಿಂದಲಾದರೂ ಪಡೆದಿದೆ ಎಂದು ಹೇಳುವುದು ಹಾಸ್ಯಾಸ್ಪದ.

ಪುರಾತನ ಕಾಲದಲ್ಲಿ ನಮ್ಮ ದೇಶವು ಇಡಿ ವಿಶ್ವಕ್ಕೇ ಗುರುಸ್ಥಾನದಲ್ಲಿತ್ತು, ಅತ್ಯಂತ ಶ್ರಮಂತ ರಾಷ್ಟ್ರವಾಗಿತ್ತು. ನಮ್ಮ ನಾಗರಿಕತೆಯೂ ಕೂಡ ಉಚ್ಚಮಟ್ಟದ್ದಾಗಿತ್ತು.  ಆದರೆ ನಮ್ಮ ದೇಶದ ಮೇಲೆ ಆದಂಥ ಅನೇಕ  ವಿದೇಶಿ ದಾಳಿಗಳಿಂದಾಗಿ ಈ ಪುಣ್ಯ ಭೂಮಿಯು ಗುಲಾಮರಂತೆ ಜೀವನ ಸಾಗಿಸಬೇಕಾಗಿ ಬಂತು. ದೇಶವು ತನ್ನ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ನೂರಾರು ವರ್ಷಗಳ ವರೆಗೂ ಅನೇಕ ಸಂಘರ್ಷಗಳನ್ನು ಮಾಡಬೇಕಾಯಿತು. ನಮ್ಮ ಸಂಪತ್ತೆಲ್ಲವನ್ನೂ ಕೊಳ್ಳೆ ಹೊಡೆಯಲಾಯಿತು.. ಆದರೂ ನಾವು ಇನ್ನೂ ಬಡವರಾಗಿಲ್ಲ.. ಇಂದು ಜಗತ್ತಿನ ಯಾವುದೇ ಸ್ಪರ್ಧೆಗಳಿರಲಿ, ಎಲ್ಲೆಲ್ಲಿಯೂ ನಮ್ಮ ಭಾರತವು ಮುಂಚೂಣಿಯಲ್ಲಿದೆ. ಐಟಿ ಕ್ಷೇತ್ರವೇ ಇರಲಿ, ಆಟೋಟಗಳ ಕ್ಷೇತ್ರವೇ ಇರಲಿ, ವೈಜ್ಞಾನಿಕ ಕ್ಷೇತ್ರವೇ ಇರಲಿ, ಎಲ್ಲದರಲ್ಲಿಯೂ ನಮ್ಮ ಯುವಕರು ತಮ್ಮ ಪ್ರಭಾವವನ್ನು ತೋರುತ್ತಲಿದ್ದಾರೆ.

ಆದರೂ ನಮ್ಮ ದೊಡ್ಡ ಸಂಖ್ಯೆಯ ಯುವಕರು ಅಪರಾಧ, ದುರಾಚಾರ ಅಥವಾ ಇನ್ನಿತರ ಕೆಟ್ಟ ಕೆಲಸಗಳಲ್ಲಿ ತೊಡಗಿರುವುದಕ್ಕೆ ಕಾರಣವೇನು? ಇದೂ ಒಂದು ಚಿಂತೆಯ ವಿಷಯವೇ! ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಮಕ್ಕಳ ಬಾಲ್ಯದ ಶಿಕ್ಷಣವೇ ಅವರ ಇಡೀ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೆಟ್ಟ ಸಹವಾಸ, ಬಾಲ್ಯದಲ್ಲಿಯ ಒಳ್ಳೆಯ ಸಂಸ್ಕಾರಗಳ ಕೊರತೆ ಹಾಗೂ ಜೀವನ ಮೌಲ್ಯಗಳ ಕೊರತೆಯಿಂದಾಗಿ ನಮ್ಮ ಯುವಶಕ್ತಿಯು ಕೆಟ್ಟ ಮಾರ್ಗವನ್ನು ಹಿಡಿದಿದೆ. ದೇಶದಲ್ಲಿ ಆತಂಕಕಾರಿ ಶಕ್ತಿಗಳೂ ಕೂಡ ಆಯ್ದುಕೊಳ್ಳುವುದು ಹದಿಹರೆಯದ ಮಕ್ಕಳನ್ನೇ! ಬಾಲ್ಯದಲ್ಲಿಯ ಒಳ್ಳೆಯ ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣಗಳಿಂದಾಗಿ ನಾವು ನಮ್ಮ ಯುವಕರನ್ನು ಇಂಥ ಮಾರ್ಗಗಳಿಂದ ವಿಮುಖರನ್ನಾಗಿ ಮಾಡಬಹುದಾಗಿದೆ. ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಮುಂದುವರೆಯುತ್ತದೆ……

Leave a Reply