ಸದ್ಯದ ಜರೂರತ್ತು

ಸದ್ಯದ ಜರೂರತ್ತು…..
ಹಿಂದೆ ಒಂದು ಸಂದರ್ಭದಲ್ಲಿ ಗಂಧರ್ವರ ಜತೆಗಿನ ಕಾದಾಟದಲ್ಲಿ ಕೌರವರು ಸೋತು ಸೆರೆಸಿಕ್ಕಿ ಸಂಕಷ್ಟದಲ್ಲಿದ್ದರು. ಸುದ್ದಿ ತಿಳಿದ ಧರ್ಮರಾಯ ತಕ್ಷಣ ತನ್ನ ತಮ್ಮಂದಿರನ್ನು ಕರೆದು ಕೌರವರ ಪರವಹಿಸಿ ಹೋರಾಡಿ ಅವರನ್ನು ಸೆರೆಯಿಂದ ಬಿಡಿಸಿ ತರುವಂತೆ ಹೇಳಿದ. ‘ಕೌರವರಾದರೋ ನಮ್ಮ ವಿರೋಧಿಗಳು, ಸ್ವಯಂ ಕೃತ ಅಪರಾಧದಿಂದ ಅವರಾಗಿಯೇ ಸಂಕಷ್ಟಕ್ಕೆ ಸಿಲುಕಿಕೊಂಡಾಗ ಅವರ ಪರ ವಹಿಸುವುದು ಎಷ್ಟು ಸರಿ?’ ಎಂಬ ಜಿಜ್ಞಾಸೆ ತಮ್ಮಂದಿರಾ ಕೇಳಿ. ನಮ್ಮ ನಮ್ಮಲ್ಲೇ ಕಲಹ ಬಂದಾಗ ನಾವು ಐದು ಜನ, ಕೌರವರು ನೂರು ಜನ ಆದರೆ ನಮ್ಮವರೆ ಮೇಲೆ ಹೊರಗಿನವರಿಂದ ಆಕ್ರಮಣವಾದಾಗ ನಾವು ನೂರಾ ಐದು ಜನ.”
ಈ ಮಾತಿನ ಅರ್ಥವಿಷ್ಟೆ, ಎಷ್ಟೆ ಸಣ್ಣತನಗಳು ಕ್ವ ಚಿತ್ತಾಗಿ ನಮ್ಮನ್ನು ಹದಗೆಡಿಸಿದರೂ ವಿವೇಕ, ವಿಚಾರಗಳಿಂದ ನಾವು ದೊಡ್ಡತನ ತೋರಬೇಕು. ಮತ್ತೆ ಒಂದಾಗಬೇಕು ಸದಾ ನಿರ್ಮಲ ಸ್ನೇಹಕ್ಕೆ ಬಾಂಧವ್ಯಕ್ಕೆ ಆತುಕೊಂಡು ಒಗ್ಗಟ್ಟಿನಿಂದ ಹೋರಾಡಬೇಕು.
ಇಂದಿನ ನಮ್ಮ ದೇಶದ ಪರಿಸ್ಥಿತಿಯನ್ನು ಗಮನಿಸಿದಾಗ ಮೇಲಿನ ಮಾತುಗಳನ್ನು ನಮಗೆ ಎಷ್ಟರ ಮಟ್ಟಿಗೆ ಅನ್ವಯ ಮಾಡಿಕೊಳ್ಳಬೇಕೆಂಬುದು ವೇದ್ಯವಾಘುತ್ತದಲ್ಲವೇ? ಒಂದೇ ದೇಶದವರಾದರೂ ನಾವು ನಮ್ಮ ನಮ್ಮಲ್ಲೇ ಜಾತಿ ಧರ್ಮ, ಗಡಿ, ಭಾಷೆ ಎಂದು ಹೀಗೆ ಪ್ರತ್ಯೇಕತೆಗೆ ಶಾಶ್ವತವಾದ ಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದೇವೆ ಇದರಿಂದ ಇಂದಿನ ಸಾಮಾಜಿಕ ಆವರಣ ಚಿಂತೆಗೀಡು ಮಾಡುವಂತೆ ಆಗಿದೆ. ಮನುಷ್ಯನ ಮಿತಿ ಮೀರಿದ ದುಷ್ಟತೆಗಳೊಂದಿಗೆ ರಾಜಕೀಯ ಅವನತಿ ಬಾಧಿಸುತ್ತಿದೆ ಯಾಂತ್ರಿಕತೆ ನಗರೀಕರಣಗಳು ಪ್ರಭಾವ ಬೀರತೊಡಗಿದಂತೆ ಮನುಷ್ಯ ಹಣಕ್ಕಾಗಿ ಯಾವ ನೀಚತನಕ್ಕಾದರೂ ಇಳಿಯುವ ಪ್ರವೃತ್ತಿ ಗೋಚರಿಸುತ್ತಿದೆ. ಪ್ರಾಮಾಣಿಕ ಹಾಗೂ ಪಾರದರ್ಶಕ ಬದುಕು ಮರೆಯಾಗಿದೆ. ಸಾಮಾಜಿಕ ಸಜ್ಜನಿಕೆಗಳು ಮಾಯವಾಗ ತೊಡಗಿದಂತೆಲ್ಲ ಎಲ್ಲಾ ಕಡೆ ಅಧಿಕಾರಕ್ಕೆ ಅಂತಸ್ತಿಗೆ ಒಳ ದಾರಿಗಳು ಸೃಷ್ಟಿಯಾಗಿದೆ. ರಾಜಮಾರ್ಗ ಯಾರಿಗೂ ಬೇಡದ ಕಾಣದ ದಾರಿಯಾಗಿದೆ.
ಸಮಾಜದ ಈ ಎಲ್ಲಾ ಏರು ಪೇರಿನ ನಡುವೆ ಗಟ್ಟಿಯಾಗಿ ಉಳಿದು ಬರಬೇಕಾದ ಅಂಶವೆಂದರೆ ನಾವೆಲ್ಲರೂ ವೈಯಕ್ತಿಕ ಹಿತಾಸಕ್ತಿಗಳನ್ನು ಮರೆಯಬೇಕು ಎಂಬುದು ಹಾಗೂ ನಮಗೆಲ್ಲ ದೇಶವೇ ಮೊದಲ ಆದ್ಯತೆಯಾಗಿ ವಿಶಾಲ ಮನಸ್ಸಿನಿಂದ ನಾವೆಲ್ಲ ಒಂದಾಗಬೇಕಾದುದೇ ಇಂದಿನ ತುರ್ತು ಅವಶ್ಯಕತೆಯಾಗಿದೆ.

ಹೊಸ್ಮನೆ ಮುತ್ತು

Leave a Reply