ವರ್ಲ್ಡ್  ಬೈಸಿಕಲ್  ಡೇ

ವರ್ಲ್ಡ್  ಬೈಸಿಕಲ್  ಡೇ   ದಂದು ಒಂದು ನೆನಪು…
ಅಪ್ಪನನ್ನು ಕಳೆದುಕೊಂಡಾಗ ನನ್ನ ಮಗನಿಗೆ ಹನ್ನೆರಡು ವರ್ಷಗಳು.ಅದೇ ವರ್ಷ ಇಂಗ್ಲಿಷ್ ಮೀಡಿಯಮ್ ಗೆ ಎಂದು ಕರ್ನಾಟಕ ಹೈಸ್ಕೂಲ್ ನಿಂದ ಮಾಳಮಡ್ಡಿ K.E B’s ಶಾಲೆಗೆ ಹೆಸರು ಹಚ್ಚಿತ್ತು. ಹೊಸಶಾಲೆ. ಇನ್ನೂ ಅಷ್ಟು friends ಆಗಿರಲಿಲ್ಲ. ಮಾಳಮಡ್ಡಿಯಲ್ಲಿರುವ ಆ ಶಾಲೆಗೆ ಹೋಗುವ ದಾರಿ ತುಂಬಾ ಏರು, ತಗ್ಗು. ಅಪ್ಪ / ಗೆಳೆಯರ ಜೊತೆ ಕರ್ನಾಟಕ ಹೈಸ್ಕೂಲ್ ಗೆ ಸಲೀಸಾಗಿ ಹೋಗುತ್ತಿದ್ದ ಅವನಿಗೆ ಈಗ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ. ತಿಂಗಳಾದ ಕೂಡಲೇ ಸೈಕಲ್ ಬೇಕೆಂದು ಶುರುವಿಟ್ಟುಕೊಂಡ. ಆಗ ೪೦೦/- ರೂ, ಇಲ್ಲದೇ ಅದನ್ನು ಕೊಳ್ಳುವುದು ಸಾಧ್ಯವಿರಲಿಲ್ಲ.ಅಷ್ಟು ಹಣ ಖರ್ಚು ಒಮ್ಮೆ ಮಾಡುವಷ್ಟು ಧೈರ್ಯ ನನ್ನಲ್ಲಿರಲಿಲ್ಲ. ಅವನೂ ಹಟ ಹಿಡಿಯುವ ಮಗನಾಗಿರಲಿಲ್ಲವಾಗಿ
ಕೆಲಕಾಲ ಮುಂದೂಡಿದೆ. ಆದರೆ ನಡೆದು ಕೊಂಡು ತಗ್ಗು, ದಿನ್ನೆ ಏರಿ ಬಳಲಿ ಬರುವ ಅವನ ಮುಖ ಕಂಡಾಗಲೆಲ್ಲ ಸಂಕಟ ವಾಗುತ್ತಿತ್ತು. ಕೊನೆಗೆ ದೀಪಾವಳಿ ಹಬ್ಬದ ಮುಂಗಡ ತೆಗೆಸಿಕೊಂಡು ರೂ.೩೬೦/- ಗೆ ಸೈಕಲ್ ತಂದದ್ದಾಯಿತು. ಅಂದಿನ ದಿನ ಎಲ್ಲರದೂ ಸಂಭ್ರಮ ಇನ್ನೂ ನೆನಪಿದೆ.
‌ನಂತರದ್ದು ಬೇರೆಯೇ ಕಥೆ. ಹೆಚ್ಚು ಆಸೆ/ ಹಟ ಯಾವುದೂ ಇಲ್ಲದೇ, ಯಾವುದಕ್ಕೂ ನನ್ನನ್ನು ಕಾಡದೇ B.E. ಮುಗಿಸಿ, ಅಮೇರಿಕಾಕ್ಕೆ ಹೋದಮೇಲೆ ಮಗ BMW/ Innova/ Honda ಹೀಗೆ ಸ್ವಂತ ಬಲದ ಮೇಲೆ ಬಟ್ಟೆ ಬದಲಿಸಿದಂತೆ ಕಾರು ಬದಲಾಯಿಸಿಕೊಂಡರೂ ನನಗೆ ಆಗ ಮೊದಲ ಸೈಕಲ್ ಖರೀದಿಯ ಕಥೆಯಷ್ಟು ರೋಮಾಂಚನವನ್ನು ಯಾವುದೇ ಕಾರು ಕೊಟ್ಟಿಲ್ಲ.ಅಮ್ಮಂದಿರು ತಮ್ಮ ಮೊದಲ ಮಗುವಿಗೆ ಹಾಕಿದ ಅಂಗಿ, ಕಟ್ಟಿದ ಕುಂಚಿಗೆ ಕಾದಿರಿಸಿದ ಕತೆಯಂತೆ ಆ ಸೈಕಲ್, ಅದನ್ನೇರಿದಾಗ ಅವನ  ಮುಖದ ಮೇಲಿನ ಖುಶಿ,ಅದನ್ನೇರಿ ಅವನು ಕೆಲವು rounds ಹೊಡೆದು ಬಂದಾಗಿನ ನಮ್ಮೆಲ್ಲರ ಸಂಭ್ರಮ…
Ohhhhh!!!
Leave a Reply