ಗೂಡು

ಗೂಡು…!

ಪಕ್ಷಿ ಜಗತ್ತಿನ ಅತಿ ಸೋಜಿಗವೆಂದರೆ ಅದು ಅವುಗಳ ಗೂಡು…! ಅವು ಗೂಡು ಕಟ್ಟುವುದರಲ್ಲಿ ಬಹಳ ಬುದ್ಧಿಶಕ್ತಿಯನ್ನೂ, ಕುಶಲತೆಯನ್ನೂ ಪ್ರದರ್ಶಿಸುತ್ತವೆ. ಕೊಕ್ಕು ಕಾಲುಗಳನ್ನು ಕುಶಲತೆಯಿಂದ ಬಳಸುತ್ತಾ, ರೆಕ್ಕೆಗಳನ್ನು ಬಡಿಯುತ್ತಾ ಗೂಡು ನಿರ್ಮಿಸುವುದನ್ನು ನೋಡುವುದೇ ಚೆನ್ನ. ಗೂಡುಗಳ ರಚನೆ, ಕಟ್ಟುವ ಜಾಗದ ಆಯ್ಕೆ, ಕಟ್ಟುವ ವಿಧಾನ, ವಿನ್ಯಾಸ ಇವೆಲ್ಲದರಲ್ಲೂ ಅವುಗಳದ್ದೇ ಆದ ವಿಶೇಷತೆ ಇದೆ. ವಿಸ್ಮಯವೆಂದರೆ ಯಾವ ಹಕ್ಕಿಯೂ ಗೂಡು ಕಟ್ಟುವ ಕಲೆಯನ್ನು ಬೇರೆಯದರಿಂದ ಕಲಿಯುವುದಿಲ್ಲ. ಪ್ರತಿ ಪ್ರಭೇದದ ಹಕ್ಕಿಗೂ ಅದರದ್ದೇ ಆದ ವಿಶಿಷ್ಟ ಗೂಡು ನಿರ್ಮಾಣ ತಂತ್ರ ಹುಟ್ಟಿನಿಂದಲೇ ಕರಗತವಾಗಿ ಬರುವ ವಿದ್ಯೆ. ಬಹುತೇಕ ಪಕ್ಷಿಗಳು ನಿಸರ್ಗ ಸಹಜ ಪರಿಸರದಲ್ಲ್ಲಿ ತಾಪಮಾನ, ಬೆಳಕಿನ ತೀವ್ರತೆ, ತೇವಾಂಶ, ಹವಾಮಾನ, ಆಹಾರದ ಲಭ್ಯತೆ, ಇತ್ಯಾದಿಗಳನ್ನು ಅವಲಂಬಿಸಿ ಗೂಡುಗಳನ್ನು ನಾನಾ ವಿನ್ಯಾಸಗಳಲ್ಲಿ ಅತ್ಯಂತ ನಾಜೂಕಾಗಿ ನಿರ್ಮಿಸಿಕೊಳ್ಳುತ್ತವೆ. ಸಂತಾನೋತ್ಪತ್ತಿ ಹಾಗೂ ವಾಸ ಎರಡನ್ನೂ ಮರದ ಪೊಟರೆಯಲ್ಲಿಯೆ ನಡೆಸುವ ಈ ಗಿಳಿಜೋಡಿಗಳಿಗೆ ಗೂಡನ್ನು ನಿರ್ಮಿಸಿಕೊಳ್ಳುತ್ತಲೇ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಆಸೆ…! ಈ ಗಿಳಿಜೋಡಿ ಕಾಣಸಿಕ್ಕಿದ್ದು ನಮ್ಮನೆಯ ಹಿತ್ತಲಿನ ತೆಂಗಿನ ಮರದಲ್ಲಿ.

ಹೊಸ್ಮನೆ ಮುತ್ತು

Leave a Reply