ಮಕ್ಕಳು…

ಮಕ್ಕಳು…
ನಿಮ್ಮ ಮಕ್ಕಳು ನಿಮ್ಮವಲ್ಲ…
ನಿಮ್ಮ ‘ಬಯಕೆ’ಯ ಕೂಸುಗಳು…
ನಿಮ್ಮ ಮುಖಾಂತರ ಬಂದಿರಬಹುದು…
ನಿಮಗಾಗಿಯೇ ಅಲ್ಲ,
ನಿಮ್ಮ ಜೊತೆಗಿರಬಹುದು,
ಆದರೂ ನಿಮ್ಮವರಲ್ಲ.
ಅವರಿಗೆ ನಿಮ್ಮ ಪ್ರೀತಿ ಕೊಡಬಲ್ಲಿರಿ…
ನಿಮ್ಮ ಯೋಚನೆಗಳನ್ನಲ್ಲ…
ಅವರಿಗೆ ತಮ್ಮವೇ ವಿಚಾರಗಳುಂಟು.
ನೀವವರ ಶರೀರಗಳಿಗೆ ಆಸರೆ ಕೊಡಬಲ್ಲಿರಿ…ಮನಸ್ಸುಗಳಿಗಲ್ಲ.
ಅವರ ಆತ್ಮ/ ಮನಸ್ಸುಗಳು
ಅವರ ‘ನಾಳೆ’ ಗಳಲ್ಲಿವೆ…
ನೀವು ತಪ್ಪಿಯೂ ಕನಸಿನಲ್ಲಿಯೂ
ಅವುಗಳನ್ನು ಮುಟ್ಟಲಾರಿರಿ.
ಅವರಂತೆ ನಿಮಗೆ ಆಗಬೇಕೆನಿಸುವಷ್ಟು
ಚಂದದ ಬದುಕು ಅವರದಾಗಬಹುದು.
ಬದುಕೆಂದೂ ಹಿಮ್ಮುಖವಾಗಿ ಹರಿಯಲಾರದು,
ಅದಕ್ಕೆ ಕಿಂಚಿತ್ತೂ ‘ನಿನ್ನೆ’ಯ ಹಂಗಿಲ್ಲ…
ಮುಂದೆ ಚಿಮ್ಮುವ ಬಾಣಗಳಿಗೆ
ನೀವು ಬರೀ ‘ಬಿಲ್ಲು’ ಮಾತ್ರ…
ನಿಮ್ಮ ಮಕ್ಕಳ ನೆಟ್ಟ ನೋಟ ಅನಂತ ಗುರಿಯತ್ತ ,
ತಮಗೆ ಬೇಕಾದಂತೆ ನಿಮ್ಮನ್ನು
ಬಾಗಿಸಿ ಆದಷ್ಟೂ ದೂರ
ತಮ್ಮ ಬಾಣ ಚಿಮ್ಮಿಸುವ ಆಶೆಯವರದು…
ಗುರಿಕಾರನ ಮರ್ಜಿಗೆ
ಬಾಗುವದೊಂದೇ ನಿಮ್ಮ ಖುಶಿ…
ಆ ದೇವರಿಗೂ ತಾ ಬಿಡುವ ಬಾಣ
ದೂರ ಹೋಗಲೇಬೇಕು ಎಂದು
ಇದ್ದಂತೆ, ಅದನ್ನು ಚಿಮ್ಮಿಸುವ ಬಿಲ್ಲೂ
ಗಟ್ಟಿಯಾಗಿರಬೇಕೆಂಬಾಸೆ…
ಮೂಲ:ಖಲೀಲ್ ಗಿಬ್ರಾನ್…
ಕನ್ನಡಕ್ಕೆ: ಶ್ರೀಮತಿ, ಕೃಷ್ಣಾ ಕೌಲಗಿ…
Leave a Reply